ವಿಟ್ಲ ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದೆ. 09-11-2019 ನೇ ಶನಿವಾರ ಬೆಳಿಗ್ಗೆ ದೈವಸ್ಥಾನದ ಸಿಂಹದ್ವಾರ ಮುಹೂರ್ತವು ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಮಹಮ್ಮಾಯಿ ಸೇವಾ ಸಮಿತಿಯ ಗೌರವಾಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ, ಅಧ್ಯಕ್ಷ ಜಯರಾಮ ಆಳ್ವ, ಕಾರ್ಯಾಧ್ಯಕ್ಷ ಪದ್ಮನಾಭ ಗೌಡ, ಕೋಶಾಧಿಕಾರಿ ಹರೀಶ್, ಪಟ್ಟಣ ಪಂಚಾಯತ್ ಸದಸ್ಯ ರಾಮದಾಸ ಶೆಣೈ, ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಸತೀಶ್ ಆಳ್ವ , ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಮುಖಂಡರುಗಳಾದ ವಿ ಸೀನ, ಮಹೇಶ್, ಲೋಕಾನಂದ, ಸುರೇಂದ್ರ, ಹರೀಶ ಮೇಗಿನಪೇಟೆ, ಜಯ ಸುಶೀಲ ಮೊದಲಾದವರು ಉಪಸ್ಥಿತರಿದ್ದರು.


