ಬಂಟ್ವಾಳ: ಕಾರೊಂದರಲ್ಲಿ  ಅಕ್ರಮವಾಗಿ ಮದ್ಯ  ಸಾಗಿಸುತ್ತಿರುವುದನ್ನು ಬಂಟ್ವಾಳ ತಾಲೂಕಿನ  ಮೂಡುಪಡುಕೋಡಿ ಗ್ರಾಮದ ನೇರಳಕಟ್ಟೆ ಎಂಬಲ್ಲಿ ಪತ್ತೆಹಚ್ಚಿರುವ  ಪುಂಜಾಲಕಟ್ಟೆ ಪೊಲೀಸರು ಈ ಸಂಬಂಧ ಒರ್ವನನ್ನು ಬಂಧಿಸಿದ್ದಾರೆ.    ಇರ್ವತ್ತೂರುಪದವು ನಿವಾಸಿ ಬಾಲಕೃಷ್ಣ ಶೆಟ್ಟಿ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ವಿವಿಧ ಕಂಪನಿಗೆ ಸೇರಿದ ಒಟ್ಟು 234 ಮದ್ಯದ ಬಾಟ್ಲಿಗಳ ಸಹಿತ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳವಾರ ರಾತ್ರಿ     ತಾಲೂಕಿನ  ಮೂಡುಪಡುಕೋಡಿ ಗ್ರಾಮದ ನೇರಳಕಟ್ಟೆ ಎಂಬಲ್ಲಿ  ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ ಐ ಸೌಮ್ಯ ಮತ್ತವರ ಸಿಬಂದಿಗಳು  ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವೇಳೆ  ಮೂರ್ಜೆ ಕಡೆಯಿಂದ ಅನುಮಾನಾಸ್ಪದವಾಗಿ ಬರುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ದಾಖಲಾತಿಯಿಲ್ಲದ  ಮದ್ಯದ ಬಾಟ್ಲಿಗಳು ಪತ್ತೆಯಾಗಿದೆ.ತಕ್ಷಣ ಆರೋಪಿಯನ್ನು ಬಂಧಿಸಿ ಕಾರನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ವಶಪಡಿಸಲಾದ ಕಾರುಸಹಿತ ಮದ್ಯದ ಮೌಲ್ಯ1.32.780 ಲಕ್ಷ ರೂ ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *