ಬಂಟ್ವಾಳ:ತಾಲೂಕು ಪಂಚಾಯತ್ ಸ್ವಾಧೀನದಲ್ಲಿರುವ ಒಟ್ಟು ಎರಡು ಎಕ್ರೆ ಸರಕಾರಿ ಜಮೀನನಲ್ಲಿ ಅಲ್ಪ ಭಾಗದಷ್ಟು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ್ದರೆ, 0.30 ಸೆಂಟ್ಸ್  ಜಮೀನು ಸರಕಾರಿ ಅಧಿಕಾರಿಗಳ ವಸತಿಗೃಹಗಳ ನಿರ್ಮಾಣಕ್ಕೆ ಕಾಯ್ದಿರಿಸಿದ್ದು ಹೊರತುಪಡಿಸಿ ತಾಲೂಕು ಪಂಚಾಯತ್ ಕಛೇರಿ ಸಹಿತ ಅಕ್ಕಪಕ್ಕದ ಯಾವುದೇ ಕಟ್ಟಡಗಳಿಗೆ ಜಮೀನೇ ಮಂಜೂರಾಗಿಲ್ಲ ಎಂಬ ಅಂಶ ಬುಧವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಬಹಿರಂಗಗೊಂಡಿದೆ.  ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸಭಾಧ್ಯಕ್ಷತೆ ವಹಿಸಿದ್ದರು.1

ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ವಿಷಯ ಪ್ರಸ್ತಾವಿಸಿ ಕಳೆದ ವಿಶೇಷ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸರ್ವೇಇಲಾಖೆ ತಾಪಂನ ಜಮೀನನ್ನು ಪೂರ್ತಿ ಅಳತೆ ಮಾಡಿ ಗಡಿಗುರುತು ಮಾಡಿ ವರದಿ ಸಲ್ಲಿಸಿದ್ದು,ಇದರಲ್ಲಿ ತಾಪಂ ಕಚೇರಿ ಮುಂಭಾಗದಲ್ಲಿ ವ್ಯಕ್ತಿಯೊಬ್ಬರು ಅಲ್ಪಪ್ರಮಾಣದಲ್ಲಿ ಜಮೀನನ್ನು ಅತಿಕ್ರಮಣಮಾಡಿದ್ದು ಕಂಡುಬಂದಿದೆ.ಹಾಗಯೇ ಕಚೇರಿ ಪಕ್ಕ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನದ 0.30 ಸೆಂಟ್ಸ್  ಜಮೀನು ಸರಕಾರಿ ಅಧಿಕಾರಿಗಳ ವಸತಿಗೃಹಕ್ಕೆ ಕಾದಿರಿಸಲಾಗಿದೆ ಉಳಿದಂತೆ ತಾಪಂ ಕಚೇರಿ ಸಹಿತ ಸ್ತ್ರೀಶಕ್ತಿ ಭವನ,ಸಾಮಾರ್ಥ್ಯ ಸೌದ,ಆಶ್ರಮ ಶಾಲೆ ,ವಾಹನ ಶೆಡ್ ಗಳಿಗೆ  ಜಮೀನೇ  ಮಂಜೂರುಗೊಂಡಿಲ್ಲ ಇದೆಲ್ಲವೂ ಪಹಣಿಪತ್ರದಲ್ಲಿ ಸರಕಾರಿ ಎಂದು ಉಲ್ಲೇಖವಿದೆ ಎಂದು ಸಭೆಯ ಗಮನಕ್ಕೆ ತಂದರು.8

ಎಂದರು. ಈ ಹಂತದಲ್ಲಿ ಮಾತನಾಡಿದ ಸದಸ್ಯ ರಮೇಶ್ ಕುಡ್ಮೇರ್ ತಾಪಂ ಆಸ್ತಿಯನ್ನು ರಕ್ಷಿಸಿಕೊಳ್ಳುವ ದೆಸೆಯಲ್ಲಿ ಇನ್ನಾದರೂ ದಾಖಲಾತಿ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರೆ,ತಾನು ಈ ಹಿಂದೆಯೇ ಹಲವಾರು ಈಬಗ್ಗೆ ಸೂಚನೆ ನೀಡಿದ್ದೇ,   ಯಾರು ಕಿವಿಗೆ ಹಾಕಿಕೊಳ್ಳಲಿಲ್ಲ,ಸಮರ್ಪಕ ದಾಖಲಾತಿಪತ್ರ ಇಲ್ಲದಿದ್ದರಿಂದ ಸಮಸ್ಯೆಗೆ ಕಾರಣವಾಗಿದೆ ಇನ್ನದರೂ ಸೂಕ್ತ ದಾಖಲೆ ಮಾಡಿಸಿಕೊಳ್ಳುವುದರ ಜತೆಗೆ ಮಾಣಿ,ವಿಟ್ಲ,ಕನ್ಯಾನದಲ್ಲಿರುವ  ತಾಪಂ ಜಮೀನನ್ನು ಕೂಡ ರಕ್ಷಿಸಿಕೊಳ್ಳಲು ಮುಂದಾಗಬೇಕು ಎಂದು ಸದಸ್ಯ ಉಸ್ನಾನ್ ಕರೋಪಾಡಿ ಹೇಳಿದರು. ಕೊನೆಗೆ ಉಳಿಕೆ ಸರಕಾರಿ ಜಮೀನು ತಾಲೂಕು ಪಂಚಾಯತ್ ಹೆಸರಿಗೆ ಕಾಯ್ದಿರಿಸಲು ನಿರ್ಣಯಿಸಲಾಯಿತು.

ಏನು ತೊಂದರೆ:

ಇದಕ್ಕು ಮೊದಲು ಜಿಪಂಸದಸ್ಯ ಎಂ.ಎಸ್.ಮಹಮ್ಮದ್ ಅವರು ತಾಪಂ ಆಸ್ತಿ ಅತಿಕ್ರಮಣ ಮಾಡಿರುವುದು ಗಂಭೀರ ವಿಚಾರ ಈ ಬಗ್ಗೆ ಈಗಾಗಲೇ ಮಾಡಲಾದ ಆಳತೆಯಲ್ಲಿ ಕಂಡು ಬಂದ ಅಂಶವನ್ನು ಸಭೆಯ ಮುಂದಿಡುವಂತೆ ಪಟ್ಟು ಹಿಡಿದರು.ಅಧ್ಯಕ್ಷ ಚಂದ್ರಹಾಸ ಕರ್ಕೇರ,ಇಓ ರಾಜಣ್ಣ ಅವರು ಪ್ರತಿಕ್ರಯಿಸಿ ಆ ವಿಷಯ ಚರ್ಚೆಗೆ ಬರಲಿದ್ದು, ಅದಕ್ಕು ಮುನ್ನ ಅಜೆಂಡಾದಂತೆ ಸ್ಥಾಯಿ ಸಮಿತಿ ರಚನೆಯಾಗ ಬೇಕಾಗಿದೆ ಎಂದು ಸಮಜಾಯಿಷಿ ನೀಡಿದರು.ಆದರೆ ಸಮ್ಮನಾಗದ ಎಂ ಎಸ್ ಮಹಮ್ಮದ್ ಈ ವಿಚಾರದಲ್ಲಿ ಅಧಿಕಾರಿಗಳಿಗೆ ನಿರಾಸಕ್ತಿ ಯಾಕೆ ಎಂದು ಪ್ರಶ್ನಿಸಿದಾಗ ಮಧ್ಯಪ್ರವೇಶಿಸಿದ ಸದಸ್ಯ ಪ್ರಭಾಕರ ಪ್ರಭು ಅಜೆಂಡಾದಂತೆ ಸಭೆ ಮುಂದುವರಿಯಲಿ,ಜಿಪಂ ಸದಸ್ಯರು ಇಲ್ಲಿ ತಮ್ಮ ಸಲಹೆಯನ್ನು ಮಾತ್ರ ನೀಡಲಿ ಪ್ರಶ್ನೆ ಮಾಡುವುದು ಬೇಡ ಎಂದು ತಿರುಗೇಟು ನೀಡಿದರು.ಅಲ್ಲಿಗೆ ಚರ್ಚೆಗೆ ತೆರೆ ಬಿದ್ದು ಸ್ಥಾಯಿ ಸಮಿತಿ ಪ್ರಕ್ರಿಯೆ ನಡೆಯಿತು.

ಮಲ್ಲಿಕಾ ಶೆಟ್ಟಿ ಅವಿರೋಧ ಆಯ್ಕೆ :

ಬಂಟ್ವಾಳ ತಾಪಂ ನ ಮುಂದಿನ 20 ತಿಂಗಳ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯೆ ಮಲ್ಲಿಕಾ ಶೆಟ್ಟಿ  ಅವರು ಅವಿರೋಧವಾಗಿ ಆಯ್ಕೆಗೊಂಡರು.ಸದಸ್ಯ ಉಸ್ಮಾನ್ ಕರೋಪಾಡಿ ಅವರು ಸೂಚಿಸಿದರೆ,ಆದಂ ಕುಂಞ ಅನುಮೋದಿಸಿದರು.  ನೂತನ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಅವರನ್ನು ಸದಸ್ಯ ಪ್ರಭಾಕರ ಪ್ರಭು ಅವರು ಅಭಿನಂದಿಸಿ ಮಾತನಾಡಿದರು.

ಬಿ.ಪಿ.ಎಲ್ ಪಡಿತರ ರದ್ದು ಸುದೀರ್ಘ ಚರ್ಚೆ:

ಬಿಪಿಎಲ್ ಪಡಿತರ ಅನರ್ಹ ವಿಚಾರ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಆಹಾರ ಪೂರೈಕೆ ಇಲಾಖೆಯ ಈ ನೀತಿಯಿಂದ ಜನಸಾಮಾನ್ಯರಲ್ಲಿ ಗೊಂದಲವುಂಟು ಮಾಡಿದೆ ಎಂದು ಸದಸ್ಯರು ಸಭೆಯಲ್ಲಿ ದೂರಿದರು.

ಇದೇ ಮೊದಲ ಬಾರಿಗೆ ಬಂಟ್ವಾಳ ತಾ.ಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಶಾಸಕ ಯು.ಟಿ.ಖಾದರ್ ಅವರು ಇದಕ್ಕೆ ಧ್ವನಿಗೂಡಿಸಿ ತಾನು ಈ ಹಿಂದೆ ಆಹಾರ ಸಚಿವನಾಗಿದ್ದಾಗ ಬಿಪಿಎಲ್ ಪಡಿತರ ಪಡೆಯಲಿದ್ದ ಕೆಲ ನಿಯಮಗಳನ್ನು ಸರಳೀಕರಣಗೊಳಿಸಿದ್ದೆ. ಅನಧಿಕೃತವಾಗಿ ಇರುವ ಶೇ.5 ರಷ್ಟು ಅನರ್ಹಬಿಪಿಎಲ್ ಪಡಿತರ ಪತ್ತೆಹಚ್ಚುವ ಭರದಲ್ಲಿ ಶೇ.95 ಮಂದಿ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ಹಂತದಲ್ಲಿ ಸದಸ್ಯ ಪ್ರಭಾಕರ ಪ್ರಭು ಕಳೆದ ಎರಡು ವರ್ಷದ ಹಿಂದೆ ಸೈಬರ್ ಸಮೇತ ಇನ್ನೀತರ ಕಡೆಗಳಲ್ಲಿ ಕೇವಲ ಆಧಾರ್ ಕಾರ್ಡ್ ಮೂಲಕ  ಮನೆನಂಬ್ರ ಇಲ್ಲದವರು ಮನೆಗೆ ಎರಡರಂತೆ  ಬಿ.ಪಿ.ಎಲ್.ಪಡಿತರ ಚೀಟಿ ಹೊಂದಿದ್ದು, ಅದರಂತೆ ಬೋಗಸ್  ಅಡುಗೆ ಅನಿಲ ಸಂಪರ್ಕ ಪಡೆದಿರುವುದು ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ ನಾಲ್ಕು ಚಕ್ರದ ಖಾಸಗಿ ವಾಹನ ಹೊಂದಿರುವ ಬಿ.ಪಿ.ಎಲ್ .ಪಡಿತರ ಚೀಟಿ  ರದ್ದು ಮಾಡುವ ಸಮಯದಲ್ಲಿ ಮನೆ ನಂಬರ್ ಇಲ್ಲದ ಬಿ.ಪಿ.ಎಲ್.ರದ್ದು ಮಾಡಿ ಎಂದು ಸಲಹೆ ನೀಡಿದರು

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆಯ ಉಪತಹಶೀಲ್ದಾರ್ ಶ್ರೀನಿವಾಸ್ ಅವರು  ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಬಿ.ಪಿ.ಎಲ್.ರದ್ದು ಸಂದರ್ಭದಲ್ಲಿ ದಂಡನೆ ವಿದಿಸುವುದನ್ನು ಮಂಗಳವಾರದಿಂದ ಜಿಲ್ಲಾಧಿಕಾರಿಯವರು ತಡೆಹಿಡಿದಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. ಆಗ  ಊಟ ಮಾಡಿದ ಅನ್ನಕ್ಕೆ ದಂಡ ವಸೂಲಿ ಮಾಡಿರುವ ಕ್ರಮ ವಿಶ್ವದ ಯಾವ ಭಾಗದಲ್ಲು ಇಲ್ಲ ಎಂದು ಶಾಸಕ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ದಂಡ ವಸೂಲಿ ನಿಲ್ಲಿಸಿದ ಬಳಿಕ ಪಡಿತರ ಸರಂಡರ್ ಮಾಡದ ಫಲಾನುಭವಿಗೆ ನೋಟೀಸ್ ಜಾರಿಗೊಳಿಸಿ ಕೇಸ್ ದಾಖಲಿಸುವ ಹುನ್ನಾರ ಅಡಗಿದೆ ಎಂದು ಶಾಸಕ ಖಾದರ್ ದೂರಿದರು.

ಈ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಸೂಚಿಸಿದರು‌. ಜನರ ಅನುಕೂಲದ ದೃಷ್ಟಿಯಿಂದ  ಆಧಾರ್ ತಿದ್ದುಪಡಿಯನ್ನು ಗ್ರಾಪಂ ಗೆ ವಹಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು.ಜನಪ್ರತಿನಿಧಿಗಳು ನ.12 ರೊಳಗಾಗಿ ಲೋಕಾಯುಕ್ತರಿಗೆ ತಮ್ಮ ಆಸ್ತಿ ವಿವರ ಸಲ್ಲಿಸುವಂತೆ ಇಒ ಸದಸ್ಯರಿಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಅಬ್ಬಾಸ್ ಅಲಿ ವೇದಿಕೆಯಲ್ಲಿದ್ದರು.ಸದಸ್ಯರಾದ ಯಶವಂತ ಪೊಳಲಿ,ರಮೇಶ್ ಕುಡ್ಮೇರ್,ಸಂಜೀವ ಪೂಜಾರಿ,ಹೈದರ್ ಕೈರಂಗಳ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು.ಜಿಪಂ ಸದಸ್ಯೆ ಕಮಾಲಾಕ್ಷಿ ಪೂಜಾರಿ ಉಪಸ್ಥಿತರಿದ್ದರು.ಇಒ ರಾಜಣ್ಣ ಸ್ವಾಗತಿಸಿ ,ವಂದಿಸಿದರು.

By Suddi9

Leave a Reply

Your email address will not be published. Required fields are marked *