ಬಂಟ್ವಾಳ: ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಉಷಾ ಅವರ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಣಿ ಕುಲಾಲ ಸಂಘದ ಅಧ್ಯಕ್ಷ ಬೋಜನಾರಾಯಣ ಕುಲಾಲ್ ಮತ್ತು ಪೆರಾಜೆ ಯುವ ವೇದಿಕೆ ಅಧ್ಯಕ್ಷ ನಿತಿನ್ ಅರ್ಭಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಅಜೆಕಲ ನಿವಾಸಿ ಉದಯ ಕುಲಾಲ್ ಅವರ ಪತ್ನಿ ಉಷಾ ಅವರು ನ.2 ರಂದು ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಉಷಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ಬಳಿಕ ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು,ಅಲ್ಲಿನ ವೈದ್ಯರು ಪರೀಕ್ಷಿಸಿ ಇವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದರು. ಉಷಾ ಅವರ ಸಾವಿಗೆ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ ಎಂಬ ಅನುಮಾನವಿದ್ದು, ಈ ಘಟನೆಯನ್ನು ಕೂಲಂಕುಷ ತನಿಖೆ ನಡೆಸುವಂತೆ ಮಾಣಿ ಕುಲಾಲ ಸಂಘ ಮತ್ತು ಯುವ ವೇದಿಕೆ ಪೆರಾಜೆ ಆಗ್ರಹಿಸಿದೆ.

