ಬಂಟ್ವಾಳ:ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಲ್ಪಡುವ ಉಚಿತ ಸೈಕಲ್‍ನ್ನು ವಿತರಿಸಲಾಯಿತು.ಬಂಟ್ವಾಳ ಪುರಸಭಾ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಅವರು ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿ, ಸರಕಾರಗಳು ನೀಡುವಂತಹ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆ ಸುಶಿಕ್ಷಿತರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.2 btl cycle

ಶಿಕ್ಷಣ ಪಡೆದ ನಂತರ ವಿದ್ಯಾರ್ಥಿಗಳು, ಪೋಷಕರ ನಿರಂತರ ಶಾಲೆಯ ಸಂಪರ್ಕವನ್ನು ಇಟ್ಟುಕೊಳ್ಳುವುದರ ಮುಖಾಂತರ ಶಾಲೆಯ ಎಲ್ಲ ರೀತಿಯ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ 8ನೇ ತರಗತಿಯ 125 ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಲ್ಪಡುವ ಉಚಿತ ಸೈಕಲ್‍ನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ವೇದಮೂರ್ತಿ ಎಂ. ಜನಾರ್ದನ್ ಭಟ್, ಮುಖ್ಯೋಪಾದ್ಯಾಯ ಭೋಜ, ಸಹಶಿಕ್ಷಕರಾದ ಅಜಿತ್ ಕುಮಾರ್, ಸುಧಾಕರ್ ಹಾಜರಿದ್ದರು.

By suddi9

Leave a Reply

Your email address will not be published. Required fields are marked *