ಬಂಟ್ವಾಳ: ಸರ್ಕಾರಿ ಶಾಲಾ ಉಳಿವಿಕೆ ಹಾಗೂ ಅಭಿವೃದ್ಧಿ ಸಮುದಾಯದ ಮೇಲೆ ನಿಂತಿದೆ .ಈ ನಿಟ್ಟಿನಲ್ಲಿ ಮಜಿ  ಶಾಲೆಯು ಇದಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪೋಷಕರಿಗೆ ಉಪಯೋಗವಾಗುವ ಉಚಿತ ಆರೋಗ್ಯ ಶಿಬಿರಗಳನ್ನು ಸಂಘಸಂಸ್ಥೆಗಳ ಸಹಕಾರದೊಂದಿಗೆ ಸಂಘಟಿಸಿ ಸಮುದಾಯದ ಸಂಪರ್ಕವನ್ನು ಈ ಶಾಲೆಯು ಗಳಿಸಿದೆ. ಎಂದು ಮಾಣಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ  ಮಂಜುಳಾ  ಮಾವೆ  ಹೇಳಿದ್ದಾರೆ. ವೀರಕಂಬ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮುದಾಯದತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
IMG_20191024_131902 (1)
 ಶಾಲೆಗೆ ಅಧಿಕೃತವಾಗಿ ದೈಹಿಕ ಶಿಕ್ಷಕರ ನೇಮಕಾತಿ ಆಗುವವರೆಗೆ ವಾರದಲ್ಲಿ ಮೂರು ದಿವಸ ದೈಹಿಕ ಶಿಕ್ಷಕರು ಇರುವ ಬದಲಿ ಶಾಲೆಯಿಂದ ನಿಯೋಜನೆ ಮಾಡುವ ಭರವಸೆ ನೀಡಿದರು .
ತಾಲೂಕು ಪಂಚಾಯತ್ ಸದಸ್ಯ  ಗೀತಾ ಚಂದ್ರಶೇಖರ್ ಮಾತನಾಡಿ ಸರಕಾರದ ಅನುದಾನವನ್ನು ಕಾಯದೆ ಶಾಲಾ ಪೋಷಕರ,, ಸಂಘ-ಸಂಸ್ಥೆಗಳ, ದಾನಿಗಳ ನೆರವಿನಿಂದ ಶಾಲೆಯು ಅಭಿವೃದ್ಧಿ ಮಾಡಲು ಸಾಧ್ಯ ಎಂದು ಮಜಿ ಶಾಲೆಯು ತೋರಿಸಿಕೊಟ್ಟಿದೆ. ಪ್ರಸಕ್ತ ಸಾಲಿನಲ್ಲಿ ತನ್ನ ತಾಪಂ ನಿಧಿಯಿಂದ  50 ಸಾ‌‌.ರೂ.ಅನುದಾನವನ್ನು ಪ್ರಕಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ  ಸಂಜೀವ ಮೂಲ್ಯ ವಹಿಸಿದ್ದರು .
ವೇದಿಕೆಯಲ್ಲಿ ಕಲ್ಲಡ್ಕ ರೈತರ ಸರಕಾರಿ ಸೇವಾ ಸಂಘದ ನಿರ್ದೇಶಕ ಕೊರಗಪ್ಪ ನಾಯ್ಕ ಸಿಂಗೆರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶಗೌಡ ಮೈರ, ಉಪಸ್ಥಿತರಿದ್ದರು .
ವೀರಕಂಬ ಗ್ರಾಮ್ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು, ಬಂಟ್ವಾಳ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮಾಜಿ ಅಧ್ಯಕ್ಷ ಲಕ್ಷ್ಮಣ ಅಗ್ರ ಬೈಲು  ಆಗಮಿಸಿ ಶಾಲಾಭಿವೃದ್ಧಿ ಬಗ್ಗೆ ಚರ್ಚಿಸಿದರು.
ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ ,ಶಿಕ್ಷಕಿ ಸಂಗೀತ ಶರ್ಮ  ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
Attachments area

 

By suddi9

Leave a Reply

Your email address will not be published. Required fields are marked *