ಬಂಟ್ವಾಳ: ಮಂಚಿ ಗ್ರಾಮದ ಕುಕ್ಕಾಜೆ ಪತ್ತುಮುಡಿ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಮಂಗನನ್ನು ಬಂಟ್ವಾಳ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ .ಸ್ಥಳೀಯರ ದೂರಿನನ್ವಯ ಕಾರ್ಯಾಚರಿಸಿದ ಬಂಟ್ವಾಳ ಅರಣ್ಯ ಇಲಾಧಿಕಾರಿಗಳು ಉಪಟಳ ನೀಡುತ್ತಿದ್ದ ಮಂಗನನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆಯು ಈ ಮಂಗ ಎರಗಿದ್ದು,ಬಳಿಕ ಮಕ್ಕಳ ಸಹಿತ ಸಾರ್ವಜನಿಕರು ಭಯಭೀತರಾಗಿದ್ದರು.

