ಬಂಟ್ವಾಳ, :  ರಾಜ್ಯದ 47 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಗೊಳಿಸಲು  ಬುಧವಾರ ಆದೇಶ ಹೊರಡಿಸಲಾಗಿದೆ. ಬಂಟ್ವಾಳ ತಾಲೂಕಿನ ಎರಡು ಠಾಣೆಯ ಮೂವರು  ಸಬ್‌ಇನ್‌ಸ್ಪೆಕ್ಟರ್‌ಗಳ ಸಹಿತ ದ.ಕ.ಜಿಲ್ಲೆಯ ವಿವಿಧ ಠಾಣೆಯ ಪಿಎಸ್ ಐ ಗಳನ್ನು ವರ್ಗಾ ವರ್ಗಿಗೊಳಿಸಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.   ಬಂಟ್ವಾಳ ನಗರ ಠಾಣೆಯ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದ ಇಬ್ಬರು  ಮತ್ತು ವಿಟ್ಲ ಠಾಣೆಯ ಪಿಎಸ್ಸೈಯವರನ್ನು ವರ್ಗಾವಣೆಗೊಳಿಸಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಸೈ ಚಂದ್ರಶೇಖರ್ ಅವರನ್ನು ವರ್ಗಾವಣೆಗೊಳಿಸಲಾಗಿದ್ದು,   ಇವರಿಗೆ ಬೇರೆ ಸ್ಥಳ ತೋರಿಸಿಲ್ಲ, ಇವರಿಂದ ತೆರವಾಗುವ ಜಾಗಕ್ಕೆ ಧರ್ಮಸ್ಥಳ ಠಾಣೆಯ ಎಸ್ಸೈ ಅವಿನಾಶ್ ಅವರನ್ನು ನಿಯುಕ್ತಿಗೊಳಿಸಲಾಗಿದೆ‌.ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಸುಧಾಕರ ತೋನ್ಸೆ ಅವರನ್ನು ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯ  ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಹಾಗೂ ವಿಟ್ಲ ಠಾಣೆಯ ಎಸ್ಸೈ ಯಲ್ಲಪ್ಪ ಅವರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ವಗರ್ಸಹಿಸಲಾಗಿದೆ.ದ.ಕ.ಜಿಲ್ಲೆಯ ಡಿಎಸ್ ಬಿ ಘಟಕದ ಎಸ್ಸೈ ಆಗಿದ್ದ ಮಂಜುಳಾ ಕೆ‌.ಎಂ. ಅವರನ್ನು ಮರಳಿ ಬಂಟ್ವಾಳ ಟ್ರಾಫಿಕ್ ಠಾಣೆಗೆ ನಿಯುಕ್ತಿಗೊಳಿಸಿ  ಆದೇಶ ಹೊರಡಿಸಲಾಗಿದೆ.ಈ ಹಿಂದೆ ಇದೇ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು.ವಿಟ್ಲ ಠಾಣೆಗೆ ಹಾಗೂ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗಕ್ಕೆ ಯಾರನ್ನು ನಿಯುಕ್ತಿಗೊಳಿಸಲಾಗಿಲ್ಲ‌.

By suddi9

Leave a Reply

Your email address will not be published. Required fields are marked *