ಫರಂಗಿಪೇಟೆ : ಉನ್ನತ  ಶಿಕ್ಷಣ ಸಂಸ್ಥೆಗಳು  ಗ್ರಾಮೀಣ ಪ್ರದೇಶ ದ ಅಭಿವೃದ್ಧಿಗೆ ಶ್ರಮಿಸಬೇಕು ಆ ಮೂಲಕ ರಾಷ್ಟ್ರ ದ  ಉನ್ನತಿಯಾಗಬೇಕು  ಎಂದು ನಿಟ್ಟೆ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆ ಎ ಬಿ ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ  ಡಾ ಯು ಎಸ್ ಕೃಷ್ಣ ನಾಯಕ್ ರವರು ಭಾರತ ಸರಕಾರ ದ ಬ್ರಹತ್ ಯೋಜನೆಗಳಲ್ಲೊಂದಾದ  ಉನ್ನತ ಭಾರತ್ ಅಭಿಯಾನ ವನ್ನು ಚಾಲನೆ ಗೊಳಿಸಿ ಮಾತನಾಡಿದರು. ನಿಟ್ಟೆ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆ ಎ ಬಿ ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ ದ ನೇತೃತ್ವ ದಲ್ಲಿ   ಸೇವಾಂಜಲಿ ಅರೋಗ್ಯ ಕೇಂದ್ರ ಫರಂಗಿಪೇಟೆ ಹಾಗು ಅಡ್ಯಾರ್ ಗ್ರಾಮ ಪಂಚಾಯತ್  ಸಹಯೋಗದಲ್ಲಿ ಅರ್ಕುಳ ಗ್ರಾಮ ದ ಎಲ್ಲ ಮನೆಗಳನ್ನು  ಸಂಪರ್ಕಿಸಿ  ಮಾಹಿತಿ ಸಂಗ್ರಹಿಸಲಾಗುವುದು  ಆ ಮೂಲಕ  ಉನ್ನತ ಭಾರತ್ ಅಭಿಯಾನದ ಪ್ರಯೋಜನ ಒದಗಿಸಲಾಗುವುದು .
IMG_4297
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ  ಗ್ರಾಮ ದ ಎಲ್ಲ ಮನೆಗಳನ್ನು ಸಂಪರ್ಕಿಸುವಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲರ ಧ್ವನಿ ಗೆ ಕಿವಿಯಾಗಬೇಕು,  ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಭಾಷಾ ಸಂವಹನೆ ಕೊರತೆಯಾದಾಗ ಆಶಾಕಾರ್ಯಕರ್ತೆಯರು ಅಂಗವಾಡಿ ಕಾರ್ಯಕರ್ತೆಯರು , ಗ್ರಾಮ ಪಂಚಾಯ್ತ್ ಸದಸ್ಯರು ಸಹಕರಿಸುವಂತೆ ಕರೆ ನೀಡಿದರು.
 ಈ ಸಂದರ್ಭದಲ್ಲಿ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ ಆಡ್ರಿ  ಡಿಕ್ರೂಜ್ , ಡಾ ರಂಜಿತ್ ಶೆಟ್ಟಿ , ಡಾ ಸಹನಾ ಮಾಬೆನ್ , ಅಡ್ಯಾರ್ ಪಂಚಾಯ್ತ್ ಅಧ್ಯಕ್ಷೆ  ಪ್ರತಿಮಾ ಮೋಹನ್ , ಉಪಾಧ್ಯಕ್ಷೆ ಆಶಾ ಪಿ ಆಚಾರ್ಯ , ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ತುಪ್ಪೆಕಲ್ಲು , ಸುಕುಮಾರ್ ಧರ್ಮಗಿರಿ , ವಿ ಅಬ್ಬಾಸ್ , ಉಬೇದುಲ್ಲಾ , ಯಾಸೀನ್  ಅಲ್ಲದೆ ಅಂಗಣವಾಡಿ  ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು , ಸಾಮಾಜಿಕ ಕಾರ್ಯಕರ್ತರು  ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *