ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ಯಕ್ಷಕಲಾ” ಪೊಳಲಿ ಇವರ 24 ನೇ ವರ್ಷದ ವಾರ್ಷಿಕೋತ್ಸವ ಅ. 5ರಂದು ಶನಿವಾರ ನಡೆಯಿತು. ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಕಳೆದ 24 ವರ್ಷಗಳಿಂದ ನಿರಂತರವಾಗಿ ಭಾಗವಹಿಸಿದ್ದ ಭಾಗವತರಾದ ದಿನೇಶ್ ಅಮ್ಮಣ್ಣಾಯ ಅವರ ಷಷ್ಠ್ಯಬ್ದಿಯದ್ಯೋತಕವಾಗಿ ಕಲಾಭಿಮಾನಿಗಳು ಹಾಗೂ “ಯಕ್ಷಕಲಾ” ಪೊಳಲಿಯ ಪರವಾಗಿ ಸನ್ಮಾನಿಸಲಾಯಿತು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ಪೊಳಲಿ ಕೋಡಿಮಜಲು ವೇದಮೂರ್ತಿ ವಿದ್ವಾನ್ ಅನಂತಪದ್ಮನಾಭ ಉಪದ್ಯಾಯ , ಪೊಳಲಿ ದೇವಳದ ಅರ್ಚಕರಾದ ಪರಮೇಶ್ವರ ಭಟ್, ನಾರಾಯಣ ಭಟ್, ಉಧ್ಯಮಿ ಭುವನೇಶ್ ಪಚಿನಡ್ಕ, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಸಂಜಯ ಕುಮಾರ್ ಗೋಣಿಬೀಡು,ಇವರ ಸಮಕ್ಷಮದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಸಂಜಯಕುಮಾರ್ ಅಭಿನಂದನಾ ಭಾಷಣ ಮಾಡಿದರು, ಯಕ್ಷಕಲಾ ಪೊಳಲಿಯ ಸ್ಥಾಪಕರಾದ ಅ.ನ.ಭ ಪೊಳಲಿ, ಸಂಚಾಲಕರಾದ ಪಿ.ವೆಂಕಟೇಶ್ ನಾವಡ, ನಿವೃತ ಪ್ರಿನ್ಸಿಪಾಲ ಶಂಕರ ಶೆಟ್ಟಿ , ಲೋಕೇಶ್ ಭರಣಿ . ಅಕ್ಷಯ್ ನಾವಡ, ನವೀನ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.
