ಉಡುಪಿ : – ಸಂತೆಕಟ್ಟೆ ಆರ್ಶಿವಾದ ಚಿತ್ರಮಂದಿರದ ಬಳಿ, ಸುಮಾರು 32 ವರ್ಷದ ಮನೋರೋಗಿ ಮಹಿಳೆಯೊಬ್ಬರು ಅಸಹಾಯಕ ಸ್ಥಿತಿಯಲ್ಲಿ ಗುರುವಾರ ರಾತ್ರಿ ಸಮಯ ಕಂಡು ಬಂದಿದ್ದರು. ಈ ಬಗ್ಗೆ ವಿಷಯ ತಿಳಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಮಹಿಳಾ ಪೋಲಿಸರ ಸಹಾಯದಿಂದ ಆಕೆಯನ್ನು ರಕ್ಷಿಸಿ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದರು.
IMG-20191011-WA0036 ಮಹಿಳೆಯ ಕಾಲಿಗೆ ತೀವ್ರ ತರಹದ ಗಾಯಗಳಾಗಿದ್ದರಿಂದ ಚಿಕಿತ್ಸೆ ನೀಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆ ನಡು ರಸ್ತೆಯಲ್ಲಿ  ಸಂಚರಿಸುತ್ತಿರುವುದನ್ನು ಸ್ಥಳಿಯರು ಗಮಿನಿಸಿದ್ದರು. ರಕ್ಷಿಸದೆ ಹೋದಲ್ಲಿ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಅಪರಿಚಿತ ಮಹಿಳೆಯ ಸಂಬಂಧಿಕರ ಪತ್ತೆಗೊಳಿಸಲು ವಿಶು ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿವರ ಬಿತ್ತರಿಸಿದ್ದರು. ಸುದ್ದಿ ಗಮನಿಸಿದ ಸಂಬಂಧಿಕರು ಸಂಪರ್ಕಿಸಿದ್ದಾರೆ. ಮಹಿಳೆ ಮಂದಾರ್ತಿ ತಂತ್ರಾಡಿಯ ಪ್ರಭಾವತಿ ಶೆಟ್ಟಿಗಾರ್ ಎಂದು ತಿಳಿದು ಬಂದಿದೆ. ಮಹಿಳೆ ಕಳೆದ ಆರು ತಿಂಗಳುಗಳಿಂದ ಔಷಧಿ ತೆಗೆದುಕೊಳ್ಳದೆ ಕಾಯಿಲೆ ಉಲ್ಭಣಗೊಳ್ಳಲು ಕಾರಣ ಎಂದು ಸಂಬಂಧಿಕರಿಂದ ತಿಳಿದು ಬಂದಿದೆ.ಕಾರ್ಯಚರಣೆಯಲ್ಲಿ ಮಹಿಳಾ ಪೋಲಿಸ್ ಠಾಣೆಯ ಠಾಣಾಧಿಕಾರಿ ಫೇಮಿನಾ, ಎ.ಎಸ್.ಐ ಮುಕ್ತ, ಸಿಬ್ಭಂದಿಗಳಾದ ಸುಮನಾ, ಸಂತೋಷ್ ಭಾಗವಹಿಸಿದ್ದರು.

 

By suddi9

Leave a Reply

Your email address will not be published. Required fields are marked *