ಬಂಟ್ವಾಳ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬರಿಮಾರು ಗ್ರಾಮದ ಮಹಾಕಾಳಿಪಡ್ಪುವಿನ ನಿವಾಸಿ ಚೆನ್ನಪ್ಪ ಪೂಜಾರಿ ಎಂಬವರ ಮಗ ದಯಾನಂದ ಎಂಬವರಿಗೆ ಬಿರ್ವೆರ್ ಕುಡ್ಲ ಇದರ ಬಂಟ್ವಾಳ ತಾಲೂಕು ಘಟಕದ ವತಿಯಿಂದ 10 ಸಾವಿರ ರುಪಾಯಿಯ ಆರ್ಥಿಕ ನೆರೆವನ್ನು ನೀಡಲಾಯಿತು. ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಪಿಲಿಗೊಬ್ಬು ಸ್ಪರ್ಧಾ ಕಾರ್ಯಕ್ರಮದಲ್ಲಿ ಬಂಟ್ವಾಳ ಘಟಕದ ಸಂಚಾಲಕ ಭುವನೇಶ್ ಪಚ್ಚಿನಡ್ಕ ಆರ್ಥಿಕ ನೆರವಿನ ಚೆಕ್ಕನ್ನು ಹಸ್ತಾಂತರಿಸಿದರು.

BTW_OCT9_11 (1)
ಈ ಸಂದರ್ಭ ಅಮ್ಟಾಡಿ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಸ್ವಾಮಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ಆಡಳಿತ ಮೋಕ್ತೇಸರ ರವಿಶಂಕರ್ ಶೆಟ್ಟಿ ಬಡಾಜೆ, ತುಳು ಚಿತ್ರನಟ ರೂಪೇಶ್ ಶೆಟ್ಟಿ, ಚಿತ್ರ ನಿರ್ಮಾಪಕ ಮಂಜುನಾಥ ಅತ್ತಾವರ, ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್‍ನ ಪೂರ್ವಾಧ್ಯಕ್ಷ ಅವಿಲ್ ಮಿನೇಜಸ್, ಬಿರ್ವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *