ಬಂಟ್ವಾಳ: ಚಿನ್ನದ ಪೇಟೆಯೆಂದೆ ಪ್ರತೀತಿ ಹೊಂದಿರುವ ಬಂಟವಾಳದ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ವಠಾರದಲ್ಲಿ  ಆರಾಧಿಸಲ್ಪಟ್ಟ 52 ನೇ ವರ್ಷದ ಶ್ರೀಶಾರದ ಮಾತೆಯ ವಿಗ್ರಹದ ಶೋಭಾಯಾತ್ರೆ ಬುಧವಾರ ರಾತ್ರಿ ಅದ್ದೂರಿಯಾಗಿ ನಡೆಯಿತು.

IMG-20191010-WA0003ದೇವಳದ ಅವರಣದಿಂದ ಹೊರಟ ಶ್ರೀಶಾರದಾ ಮಾತೆಯ ಭವ್ಯವಾದ ಶೋಭಾಯಾತ್ರೆಯು ಅಂಚೆ ಕಚೇರಿಯವರೆಗೆ ತೆರಳಿ,, ವಾಪಾಸ್  ರಥಬೀದಿಯ ಮೂಲಕ ಬೈಪಾಸ್ ರಾಮನಗರದವರೆಗೆ ಸಾಗಿತು.ಅಲ್ಲಿಂದ ಆದೇ ದಾರಿಯಾಗಿ ವಾಪಾಸ್ ಬಂದು ಬಡ್ಡಕಟ್ಟೆ ಹನುಮಾನ್ ದೇವಳದವೆರೆಗೆ ತೆರಳಿ ಅಲ್ಲಿಂದ ವಾಪಾಸ್ ಬಂದು ತ್ಯಾಗರಾಜರಸ್ತೆಯಾಗಿ ದೇವಳದ ಮಂಭಾಗ ಹರಿಯುವ ನೇತ್ರಾವತಿ ನದಿಯಲ್ಲಿಜಲಸ್ತಂಭನಗೊಳಿಸಲಾಯಿತು.

IMG_20191010_010648 ಇದರೊಂದಿಗೆ ಐದುದಿನಗಳ ಕಾಲ ಆರಾಧಿಸಲ್ಪಟ್ಟ ಶಾರದ ಮಹೋತ್ಸವ ಗುರುವಾರ ಮುಂಜಾನೆ ಸಂಪನ್ನಗೊಂಡಿತು.  ಭಜಕರು ಶಾರದ ಮಾತೆಯ ವಿಗ್ರಹವನ್ನು ಭುಜದಲ್ಲಿ ಹೊತ್ತುಕೊಂಡೆ ಸಾಗಿದರು. ವಿಶೇಷ ಸ್ತಬ್ದಚಿತ್ರಗಳು,ಹುಲಿವೇಷಗಳ ಅಬ್ಬರ,ಉತ್ತರಪ್ರದೇಶದ ಅಘೋರಿ,ಸಾಧುಸಂತರು,ಸರ್ಜಿಕಲ್ ಸ್ಟ್ರೈಕ್ ದೃಶ್ಯಾವಳಿ, ಅನರ್ ಕಲಿ ಕುಣಿತ,ನಾಸಿಕ್ ಬ್ಯಾಂಡ್, ಚೆಂಡೆವಾದನ,ವಿವಿಧ ವೇಷಧಾರಿಗಳ ನರ್ತನ ಶೋಭಾಯಾತ್ರೆಯಲ್ಲಿ ಗಮನಸೆಳೆದವು.ಸಾವಿರಾರು ಸಂಖ್ಉಎಯಲ್ಲಿ ಭಗವದ್ಬಕ್ತರು ನೆರೆದಿದ್ದು,ಶ್ರೀಶಾರದಮಾತೆಯನ್ನು ಕಣ್ತುಂಬಿಕೊಂಡರು.

IMG_20191010_010607

By suddi9

Leave a Reply

Your email address will not be published. Required fields are marked *