ಪೊಳಲಿ:ದೇವಾಡಿಗ ಸಮಾಜದವರು ಶ್ರೀರಾಜರಾಜೇಶ್ವರೀ ದೇವಳಕ್ಕೆ ಕೊಡುಗೆಯಾಗಿ ನೀಡುವ ಷಷ್ಟಿ ರಥದ ಕೆಲಸಕಾರ್ಯಗಳನು ವೀಕ್ಷಿಸಿದ ದುಬೈ ಉದ್ಯಮಿ ಹರೀಶ್ ಶೇರಿಗಾರ್ ಮರದ ಕೆತ್ತನೆ ಕೆಲಸಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.ಸಾಗುವನಿ ಹಾಗೂ , ಬೋಗಿ,ಹೆಬ್ಬಲಸು ಮರದಿಂದ ನಿರ್ಮಾಣಗೊಳ್ಳುತ್ತಿರುವ ರಥದ ಕೆತ್ತನೆ ಕೆಲಸಗಳು ಶೀಘ್ರವಾಗಿ ನಡೆಯಲಿ ಎಂದರು.
ಅವರೊಂದಿಗೆ ಧರ್ಮಪತ್ನಿ ಶರ್ಮಿಳಾ ಹರೀಶ್ ಶೇರಿಗಾರ್ ಹಾಗೂ ನಟಿ ಗಾಯತ್ರಿ ಅನಂತ್ನಾಗ್ ಅವರು ಪೊಳಲಿಗೆ ಆಗಮಿಸಿ ರಥದ ಕೆತ್ತನೆಯ ಕಲಸ ಮಾಡುವ ಕಾರ್ಯಗಾರಕ್ಕೆ ಬಂದು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕೃಷ್ಣಪ್ಪ ದೇವಾಡಿಗ ಪೊಳಲಿ, ಕರಿಯಂಗಳ ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಮುರಳಿ ಪಡ್ಪು ಮತ್ತಿತರರು ಇದ್ದರು.
