ಬಂಟ್ವಾಳ:ಹೃದಯದಲ್ಲಿ ಶ್ರೀರಾಮನನ್ನು ಶಾಶ್ವತವಾಗಿ ಇಟ್ಟುಕೊಂಡು ತನ್ನ ಜೀವನವನ್ನೇ ಸಂದೇಶವಾಗಿಸಿದ ಮಹಾತ್ಮಾ ಗಾಂಧೀಜಿ ಸನಾತನ ಹಿಂದೂ ಧರ್ಮದ ನೈಜ ಪ್ರತೀಕವಾಗಿ ಜಗತ್ತಿಗೆ ಮಾನವೀಯತೆ ಧರ್ಮವನ್ನು ಸಾರಿದ್ದಾರೆ ಎಂದು ಸಾಮಾಜಿಕ ಚಿಂತಕ ನಿಕೇತ್ ರಾಜ್ ಮೌರ್ಯ ಹೇಳಿದ್ದಾರೆ.  
ಇಲ್ಲಿನ ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ  ಸಮಾರೋಪಗೊಂಡ ಪ್ರಥಮ ವರ್ಷದ ಶಾರದೋತ್ಸವ ಧಾರ್ಮಿಕಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. 
7btl-Rai
ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದಾಗ ಅಲ್ಲಿ  ಎಲ್ಲರೂ ಪರಸ್ಪರ ಪ್ರೀತಿಯಿಂದ ಭಾಗವಹಿಸುವಂತಿರಬೇಕು. ಸಮಾಜದಲ್ಲಿ ಸುಳ್ಳು ಜ್ವಾಲಾಮುಖಿಯಂತೆ ಹರಡಿದರೆ, ಸತ್ಯ ನಿಧಾನವಾಗಿ ಪಸರಿಸುತ್ತದೆ ಎಂದರು.
ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ, ಉದ್ಯಮಿ ಗೋಪಾಲಕೃಷ್ಣ ಆಚಾರ್ಯ ಮಾರ್ನಬೈಲು, ಹರೀಶ ಡಿ.ಪೂಜಾರಿ, ಹೇಮಚಂದ್ರ ಗೌಡ,  ಉಪ ಪ್ರಾಂಶುಪಾಲ ರಮಾನಂದ, ಯುವ ಬಂಟರ ಸಂಘದ ಅಧ್ಯಕ್ಷ ನಿಶಾನ್ ಆಳ್ವ, ವಕೀಲ ಸುರೇಶ ಕುಲಾಲ್, ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಲೋಕೇಶ ಕೈತ್ರೋಡಿ, ಶಾರದೋತ್ಸವ ಸಮಿತಿ ಅಧ್ಯಕ್ಷ ಲೋಕೇಶ ಶೆಟ್ಟಿ ಮೊಯಿಲೊಟ್ಟು ಮತ್ತಿತರರು ಶುಭ ಹಾರೈಸಿದರು. 
ಸಮಿತಿ ಸಂಚಾಲಕ ಜಗದೀಶ ಕೊಯಿಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಉಮೇಶ ಹಿಂಗಾಣಿ ವಂದಿಸಿದರು. ರಾಜೀವ ಕಕ್ಯಪದವು ನಿರೂಪಿಸಿದರು. 
ವಿಧಾನಪರಿಷತ್ ಸದಸ್ಯ ಕೆ.ಹರೀಶ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಮಂಜುಳಾ ಮಾವೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕೆ.ಮಾಯಿಲಪ್ಪ ಸಾಲ್ಯಾನ್ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *