ಫರಂಗಿಪೇಟೆ : ಪ್ರಪಂಚದ ಯಾವುದೇ ವಿಜ್ಞಾನ ದಿಂದ ಅಥವಾ ವಿಜ್ಞಾನಿ ಗಳಿಂದ ಭೇದಿಸಲಾಗದ ಶಕ್ತಿಯನ್ನು ನಾವು ದುರ್ಗೆಯ ರೂಪದಲ್ಲಿ ಆರಾಧಿಸಿಕೊಂಡು ಬಂದಿದ್ದೇವೆ ಎಂದು ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಶ್ರೀ ಲಕ್ಷ್ಮಿ ಸತ್ಯ ನಾರಾಯಣ ಕ್ಷೇತ್ರ ಕರಿಂಜೆ ಇವರು ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರೀ) ತುಂಬೆ ಇದರ ಆಶ್ರಯದಲ್ಲಿ ನಡೆದ ೧೯ ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ದಲ್ಲಿ ಆಶೀರ್ವಚನ ನೀಡಿದರು . ಬೆಳಿಗ್ಗೆ ಬಾಳಿಗಾ ಜ್ಯೂವೆಲ್ಲರ್ಸ್ ಬಂಟ್ವಾಳ ಇದರ ಮಾಲಕರಾದ ಸುದೀರ್ ಬಾಳಿಗಾ ರವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ಗೊಂಡ ಉತ್ಸವ ದಲ್ಲಿ ಶ್ರೀ ರಾದ ಕೃಷ್ಣ ಅಡ್ಯಂತಾಯರು ಪ್ರಾಂತ ಕಾರ್ಯದರ್ಶಿ ಹಿಂದೂ ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಇವರು ದಿಕ್ಸೂಚಿ ಭಾಷಣ ಮಾಡಿದರು .
ವೇದಿಕೆಯಲ್ಲಿ ಭುವನೇಶ್ ಪಚ್ಚಿನಡ್ಕ, ಸದಾನಂದ ಆಳ್ವ ಕಂಪ ಗಡಿ ಪ್ರಧಾನರು ಶ್ರೀ ಉಳ್ಳಾಕ್ಲು ಮಗ್ರಂತಾಯಿ ಕ್ಷೇತ್ರ ಅರ್ಕುಳ , ಡಾ ಸುಂದರ ಮೊಯ್ಲಿ ಸಂಚಾಲಕರು ಮಂಗಳ ವಿದ್ಯಾಕೇಂದ್ರ ಮಣ್ಣಗುಡ್ಡೆ , ಮಹಾಬಲ ಕೊಟ್ಟಾರಿ ಮುನ್ನೂರು ಎಂ ಎಂ ಕನ್ಸ್ಟ್ರಕ್ಷನ್ಸ್ ಮಂಗಳೂರು , ಚಂದ್ರಹಾಸ ಶೆಟ್ಟಿ ರಂಗೋಲಿ ಬಿ ಸಿ ರೋಡ್ , ವಿಶ್ವನಾಥ್ ಬಿ ಬಂಟ್ವಾಳ ತಾಲೂಕ ಗ್ಯಾರೇಜು ಮಾಲಕರ ಸಂಘ , ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ , ಕೋಶಾಧಿಕಾರಿ ಟಿ ಸೋಮಪ್ಪ ಕೋಟ್ಯಾನ್ , ಉತ್ಸವ ಸಮಿತಿ ಕಾರ್ಯದರ್ಶಿ ದಿವಾಕರ ಪೆರ್ಲ ಬೈಲು , ಕೋಶಾಧಿಕಾರಿ ಪುರುಷೋತ್ತಮ ಗಟ್ಟಿ ದಿನೇಶ್ ಸನಿಲ್ , ಸಂದೀಪ್ ಕುಲಾಲ , ಸೋಮಶೇಖರ ಪೆರ್ಲಕ್ಕೆ , ಯಶೋದಾ ಮುದಲ್ಮೆ , ಶಶಿಕಲಾ ಬೊಳ್ಳಾರಿ , ಶರಣ್ ಬೊಳ್ಳಾರಿ , ಪ್ರಭಾ ತುಂಬೆ , ಮತ್ತಿತರರು ಉಪಸ್ಥಿತರಿದ್ದರು ಉತ್ಸವ ಸಮಿತಿ ಅಧ್ಯಕ್ಷರಾದ ತೇವು ತಾರಾನಾಥ್ ಕೊಟ್ಟಾರಿ ಸ್ವಾಗತಿಸಿದರು , ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಇದರ ಪ್ರದಾನ ಕಾರ್ಯದರ್ಶಿ ಪ್ರವೀಣ್ ಬಿ ತುಂಬೆ ಪ್ರಸ್ತಾವನೆ ಗೈದರು , ಗಣೇಶ್ ಸುವರ್ಣ ವಂದಿಸಿದರು ಜಗದೀಶ್ ಕಡೆಗೋಳಿ , ಸಂತೋಷ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.