ಎಡಪದವು : ಕುಡುಬಿ ಜಾನಪದ ಕಲಾವಿದ, ಕುಡುಬಿ ಕೊಂಕಣಿ ಸಾಹಿತಿ, ಕುಡುಬಿ ಜನಪದ ಕಲಾವೇದಿಕೆಯ ಸಂಸ್ಥಾಪಕ ಹಾಗೂ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಎಡಪದವಿನ ಎಂ ಗೋಪಾಲ ಗೌಡ ಅ. 2ರಂದು ನಿಧನರಾದರು.4vp gopal gauda

ನಿವೃತ್ತಿಯ ಬಳಿಕವೂ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಗ್ರಂಥಾಲಯದಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಜನಪದ ಕಲಾವಿದರಾಗಿ ದೇಶದೆಲ್ಲೆಡೆ ಕುಡುಬಿ ಜನಾಂಗದ ಗುಮಟೆ ಮತ್ತು ಕೋಲಾಟ ಪಸರಿಸುವಲ್ಲಿ ಇವರು ಶ್ರಮ ವಹಿಸಿದ್ದರು. ಕೆಲವು ದಿನಗಳಿಂದ ಮಾನಸಿಕವಾಗಿ ವ್ಯಥೆಗೊಂಡಿದ್ದ ಇವರು, ಅ. 2ರಂದು ಮಧ್ಯಾಹ್ನ ಮನೆಯ ಸ್ನಾನಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಠಾಣಾಧಿಕಾರಿ ಹೇಳಿದರು.

By suddi9

Leave a Reply

Your email address will not be published. Required fields are marked *