ಅಪರಿಚಿತ ಮೃತ್ಯು
ಬಜಪೆ: ಬಜಪೆ ಪೋಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಕಂಬಳ ಬಳಿ ಫೆ.9ರಂದು ಬೈಕ್ ಸ್ಕಿಡ್ ಆಗಿ ಬಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಅಪರಿಚಿತ ಯುವಕ ಫೆ.11ರಂದು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಸ್ಥಳೀಯರೊಬ್ಬರು ಬೈಕ್ನಲ್ಲಿ ಬರುತ್ತಿದ್ದಾಗ ಕೈಕಂಬ ಬಳಿ ತಾನೂ ಬರುವುದಾಗಿ ಹೇಳಿ ಬಂದಿದ್ದ ಯುವಕ ಆಸ್ಪತ್ರೆಯಲ್ಲಿ ಪ್ರವೀಣ(20) ಎಂದು ಹೆಸರು ತಿಳಿಸಿದ್ದು ಉಳಿದಂತೆ ಆತನ ವಿವರ ಲಭ್ಯವಿಲ್ಲ. ಮೃತನ ಶವವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಗಾಯಗೊಂಡು ಮೃತಪಟ್ಟ ಯುವಕ ಹಿಂದಿ ಭಾಷೆ ಮಾತನಾಡುತ್ತಿದ್ದಎನ್ನಲಾಗಿದೆ
