ಬಂಟ್ವಾಳ, : ಶಾಲಾ ಮಕ್ಕಳಿಗೆ ಅನುಕೂಲವಾಗುವ ದೆಸೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಶಾಲಾರಂಭದ ದಿನವೇ ಪಠ್ಯಪಸ್ತಕ-ಸಮವಸ್ತ್ರಗಳನ್ನು ವಿತರಿಸಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರು ಹೇಳಿದರು.

ಅವರು ಸೋಮವಾರ ಬಂಟ್ವಾಳದ ದಡ್ಡಲಕಾಡು ಸರಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸರಕಾರಿ ಶಾಲೆಯ ಪ್ರಾರಂಭದ ದಿನವನ್ನು ನಾವು ತಳಿರು-ತೋರಣಗಳಿಂದ ಸಿಂಗರಿಸಿ ಸಂಭ್ರಮಿಸುತ್ತೆವೆ. ಆದರೆ ಮುಂದಿನ ದಿನಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳು ಪಠ್ಯಪಸ್ತಕ, ಸಮವಸ್ತ್ರ, ಶೂ,ಸಾಕ್ಸ್ , ಸೈಕಲ್. ಸಿಗದೆ ತೊಂದರೆ ಅನುಭವಿಸುತ್ತಿದ್ದು, ಈ ಸಮಸ್ಯೆಯನ್ನು ಪರಿಹರಿಸುವುದು ಸರಕಾರದ ಕರ್ತ್ತವ್ಯ. ವಾಗಿದೆ ಹಾಗಾಗಿ ರಾಜ್ಯದ ಎಲ್ಲಾ ಸರಕಾರಿ ಶಾಲೆಗೆ ಮುಂದಿನ ಶೈಕ್ಷಣಿಕ ವರ್ಷ ದಿಂದ ಶಾಲರಂಭದಲ್ಲೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಗೆ ಕ್ರಮಕೈಗೊ ಳ್ಳಲಾಗಿದೆ ಎಂದರು .
ಒಬ್ಬ ಪ್ರಕಾಶ್ ಅಂಚನ್ ಅವರು ದಡ್ಡಲಕಾಡು ಶಾಲೆಯ ಚಿತ್ರಣವನ್ನೆ ಬದಲಿಸಿದ್ದು, ತನಗೆ ಇಂತಹ ೨೫ ಮಂದಿ ಪ್ರಕಾಶ್ ಅಂಚನ್ಗಳು ಸಿಕ್ಕಿದರೆ ಎಲ್ಲಾ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ನೆರವಾಗಲಿದೆ. ದಡ್ಡಲಕಾಡಿಗೆ ಪ್ರೌಢಶಾಲೆ ನೀಡಲು ಬೇಡಿಕೆ ಇದ್ದು, ಸರಕಾರ ಈ ಬೇಡಿಕೆ ಈಡೇರಿಸದಿದ್ದರೆ ಅಪರಾಧವಾಗುತ್ತದೆ. ಹೀಗಾಗಿ ಇಲ್ಲಿನ ಅಧಿಕಾರಿಗಳ ವರದಿ ಆಧರಿಸಿ ಶೀಘ್ರ ಪ್ರೌಢಶಾಲೆ ಮಂಜೂರಾತಿಯ ಆದೇಶ ಹೊರಡಿಸುವುದಾಗಿ ಸಚಿವರು ಭರವಸೆ ನೀಡಿದರು. ಇದೇ ವೇಳೆ ಸಚಿವರು ಶಾಲೆಯ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಮಾಡುವ ಸೈಕಲ್ಗಳನ್ನು ವಿತರಿಸಿದರು. ತರಗತಿಯೊಂದಕ್ಕೆ ಭೇಟಿ ಮಕ್ಕಳಲ್ಲಿ ಇಂಗ್ಲಿಷ್ನ ಪದ್ಯವೊಂದನ್ನು ಹೇಳಿಸಿದರು. ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರು ದಡ್ಡಲಕಾಡಿಗೆ ಪ್ರೌಢಶಾಲೆಯನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಗ್ರಾ.ಪಂ.ಅಧ್ಯಕ್ಷೆ ಸುಮಿತ್ರಾ ಕುಲಾಲ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಬಂಟ್ವಾಳ ಶಿಕ್ಷಣಾಕಾರಿ ಜ್ಞಾನೇಶ್ .ಟಿಸಿಎಚ್ ಪ್ರಿನ್ಸಿಪಾಲ್, ಸಹನಿರ್ದೇಶಕಿ ಶಾರದಾ, ಜಿಲ್ಲಾ ಅಕ್ಷರ ದಾಸೋಹ ನಿರ್ದೇಶಕಿ ರಾಜಲಕ್ಷ್ಮೀ, ಕ್ಷೇತ್ರ ಸಂಪನ್ಮೂಲ ಕೇಂದ್ರ ಅಧಿಕಾರಿ ರಾಧಾಕೃಷ್ಣ ಭಟ್, ಅಕ್ಷರ ದಾಸೋಹದ ನೋಡಲ್ ಅಧಿಕಾರಿ ನೋಣಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಮಚಂದ್ರ ಕರೆಂಕಿ, ಬಿಇಒ ಲೋಕೇಶ್, ಗ್ರಾಪಂ ಸದಸ್ಯರಾದ ಪೂವಪ್ಪ ಮೆಂಡನ್, ರಾಜಶ್ರೀ, ಸಂಜೀವ ಪೂಜಾರಿ ಮಾದಲಾದವರಿದ್ದರು.
