ಬಂಟ್ವಾಳ : ಬಂಟ್ವಾಳ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಕ್ಲಬ್ನ ಸಭಾಂಗಣದಲ್ಲಿ ನಡೆದ ಅಕ್ಯೂಪ್ರೆಶರ್ ಮತ್ತು ಸುಜೋಕ್ ತೆರಪಿ ಚಿಕಿತ್ಸಾ ಶಿಬಿರವನ್ನು ಕ್ಲಬ್ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಅವರು ಉದ್ಘಾಟಿಸಿದರು. ಡಾ. ರಾಮ ಮನೋಹರ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನಂನ ವೈದ್ಯ ಡಾ. ಎಂ.ಆರ್.ಜಾಕಬ್, ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಅವಿಲ್ ಮಿನೇಜಸ್, ಕಾರ್ಯದರ್ಶಿ ಮೇರಿ ಶ್ರುತಿ ಮಾಡ್ತ, ಕೋಶಾ„ಕಾರಿ ರಾಮಚಂದ್ರ ಶೆಟ್ಟಿಗಾರ್, ಪದಾ„ಕಾರಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

