ಬಂಟ್ವಾಳ: ಉನ್ನತ ಭಾರತ್ ಅಭಿಯಾನ್ ನಅಂಗವಾಗಿ ಸಜೀಪನಡು ಗ್ರಾಮ ಪಂಚಾಯತ್ ಹಾಗೂ ಯನೆಪೊಯಾ (ಡೀಮ್ಡ್) ಯುನಿವರ್ಸಿಟಿ ಇದರ ಜಂಟಿ ಆಶ್ರಯದಲ್ಲಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ನಾಸಿರ್ ಸಜೀಪ ಅವರು ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಯನೆಪೊಯಾ ಯುನಿವರ್ಸಿಟಿ ಮುಖ್ಯಸ್ಥರು ಮತ್ತು ಕಾಲೆಜ್ ವಿಧ್ಯಾರ್ಥಿಗಳು ಗ್ರಾಪಂ ವ್ಯಾಪ್ತಿಯಲ್ಲಿ ಮನೆ,ಮನೆಗೆ ಭೇಟಿ ನೀಡಿ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.ಇದೇ ವೇಳೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ ನೀಡಿ ಉಚಿತ ಬಟ್ಟೆ ಕೈಚೀಲವನ್ನು ವಿತರಿಸಿದರು.


