ಬಂಟ್ವಾಳ : ಇಲ್ಲಿನ ವಿಧಾನ ಸಭಾ ಕ್ಷೇತ್ರದ ಕರ್ಪೆ ಗ್ರಾಮದ 1 ಮತ್ತು 2 ಬೂತ್ ಸಮಿತಿ ಯನ್ನು ಪುನರ್ರರಚಿಸಲಾಯಿತು.
ಕರ್ಪೆ ಗ್ರಾಮದ ಪಾರ್ಲ ಕೃಷ್ಣ ಪ್ರಭುರವರ ಮನೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಅದ್ಯಕ್ಷ .ಕೆ. ರತ್ನಕುಮಾರ್ ಚೌಟ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ,ಬೂತ್ ಅದ್ಯಕ್ಷ ಕೆ.ರಾಮಕೃಷ್ಣ ನಾಯಕ್.ಪ್ರಮುಖರಾದ ಚಂದ್ರಶೇಖರ ಪೂವಳ, ರಾಜೇಂದ್ರ ಪೂಜಾರಿ ನೆಕ್ಲಾಜೆ ,ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಕರ್ಪೆ ಬೂತ್ ಸಂಖ್ಯ 1 ರ ನೂತನ ಅದ್ಯಕ್ಷರಾಗಿ ತೇಜಸ್ ಕರ್ಪೆ, ಪ್ರದಾನ ಕಾರ್ಯದರ್ಶಿ ಯಾಗಿ ರಂಜಿತ್ ಮಡಿವಾಳ ಪೂವಳ ಕರ್ಪೆ,ಕಾರ್ಯದರ್ಶಿಗಳಾಗಿ ಹರೀಶ್ ಪೂಜಾರಿ ಪಾದೆಕರ್ಪೆ,ಭಾಸ್ಕರ ಪ್ರಭು ಬಾಳಿಕೆ, ಅಯ್ಕೆಗೊಂಡರು.ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಹಾಗೆಯೇ ಕರ್ಪೆಗ್ರಾಮದ ಬೂತ್ ಸಮಿತಿ ಸಂಖ್ಯೆ 2 ರ ನೂತನ ಅಧ್ಯಕ್ಷರಾಗಿ ನವೀನ್ ಪೂಜಾರಿ ಹೊಸ ಒಕ್ಲು ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ದಾಮೋದರ ನಾಯ್ಕ್ ಗುಳಿಗುಳಿ, ಹರೀಶ್ ಪೂಜಾರಿ ಶೆಟ್ಟಿಬೆಟ್ಟು ಇವರು ಆಯ್ಕೆಯಾದರು.ಹಾಗೆಯೇ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು. ಕೆ. ರಾಮಕೃಷ್ಣ ನಾಯಕ್ ಸ್ವಾಗತಿಸಿದರು.ನವೀನ ವಂದಿಸಿದರು


