ಸುಬ್ರಹ್ಮಣ್ಯ :  ಕ್ಷೇತ್ರದ ಬ್ರಹ್ಮರಥ ನಿರ್ಮಾಣವಾಗಿ ಸೆ.30ರ ಸೋಮವಾರ ಕೋಟೇಶ್ವರದಿಂದ ಹೊರಟು ಸುಬ್ರಹ್ಮಣ್ಯದವರೆಗೆ ಸಾಗಲಿದ್ದು, ಅಕ್ಟೋಬರ್ 1ರಂದು ಕಲ್ಲಡ್ಕಕ್ಕೆ ಆಗಮಿಸಲಿದೆ. ಸುಮಾರು 500 ವರ್ಷಗಳಷ್ಟು ಹಳೆಯದಾದ ಬ್ರಹ್ಮರಥದ ಶಿಥಿಲಾವಸ್ಥೆಯನ್ನು ಮನಗಂಡ ಭಕ್ತರು ಮತ್ತು ಆಡಳಿತ ಸಮಿತಿ ದಾನಿಗಳ ನೆರವಿನಿಂದ ನೂತನ ಬ್ರಹ್ಮರಥದ ನಿರ್ಮಾಣ ಕೈಂಕರ್ಯಕ್ಕೆ ಮುಂದಾಗಿದ್ದು ಕೆಲಸ ಕಾರ್ಯ ಅಂತಿಮ ಹಂತದಲ್ಲಿದೆ. ನೂತನ ಬ್ರಹ್ಮರಥವು ರಥಶಿಲ್ಪಿ ಕೋಟೇಶ್ವರ ಲಕ್ಷ್ಮಿನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ಹಿಂದಿನ ಬ್ರಹ್ಮರಥದ ಪಡಿಯಚ್ಚಿನಂತೆ ಸಂಪ್ರದಾಯಬದ್ದವಾಗಿ ವಿಶಿಷ್ಟ ಕಾಷ್ಟಶಿಲ್ಪಗಳೊಂದಿಗೆ ಅತ್ಯಾಕರ್ಷಕವಾಗಿ ಮೂಡಿಬರುತಿದ್ದು ಇದೀಗ ತನ್ನ ಒಡೆಯನ ಸೇವೆಗೆ ಸಮರ್ಪಿತವಾಗಲು ಶೃಂಗಾರಗೊಂಡು ಬೃಹತ್ ಟ್ರಾಲಿಯಲ್ಲಿ ಶ್ರೀ ಕ್ಷೇತ್ರಕ್ಕೆ ಹೊರಟು ನಿಂತಿದೆ.

25bhbrahmaratha

ಸೆ.30ರ ಸೋಮವಾರ ಕೋಟೇಶ್ವರದಿಂದ ಸುಬ್ರಹ್ಮಣ್ಯಕ್ಕೆ ಸಮರ್ಪಣ ಯಾತ್ರೆ ಗಜ ಗಾಂಭೀರ್ಯದಲ್ಲಿ ಸಾಗಿಬರಲಿದೆ. ಅಕ್ಟೋಬರ್ 1 ಮಂಗಳವಾರ ಸಂಜೆ ಸುಮಾರು 3.30 ರ ಸಮಯ ಕಲ್ಲಡ್ಕ ಕ್ಕೆ ಪುರಪ್ರವೇಶ ಮಾಡುವ ರಥವನ್ನು ಕಲ್ಲಡ್ಕ ಶ್ರೀ ಶಾರದ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಕಲ್ಲಡ್ಕ ಕೆಳಗಿನ ಪೇಟೆಯಲ್ಲಿ ಸ್ವಾಗತಿಸಲಾಗುವುದು. ಶ್ರೀ ರಾಮ ಮಂದಿರದ ಎದುರು ಪೂಜೆ ಸಲ್ಲಿಸಿ ಮೇಲಿನ ಪೇಟೆಯಲ್ಲಿ ಬೀಳ್ಕೊಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Attachments area

 

By suddi9

Leave a Reply

Your email address will not be published. Required fields are marked *