ಬಂಟ್ವಾಳ : ಮೂರ್ತೆದಾರರ ಮಹಾಮಂಡಲ ಮಹಾಸಭೆಯು ಅಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ರವರ ಅಧ್ಯಕ್ಷತೆಯಲ್ಲಿಮೆಲ್ಕಾರ್ ಬಿರ್ವಸೆಂಟರ್ ಸಭಾಂಗಣದಲ್ಲಿ ನಡೆಯಿತು. ಮುಂದಿನ ವರ್ಷದಲ್ಲಿ ಮಹಾಮಂಡಲದ ವತಿಯಿಂದ ಎರಡು ಕೋಟಿ ರೂಪಾಯಿ ಸಾಲ ವಿತರಿಸಲು ಯೋಜನೆ ರೂಪಿಸಲಾಗುವುದು.
ಸಿಬ್ಬಂದಿಗಳಿಗೆ ಹಾಗೂ ನಿರ್ದೇಶಕರುಗಳಿಗೆತರಬೇತಿ ಕಾರ್ಯಾಗಾರ ಆಯೋಜಿಲಾಗುವುದು ಹಾಗೂ ಮಹಾಮಂಡಲಕ್ಕೆಸುಸಜ್ಜಿತವಾದ ಕಛೇರಿ ನಿರ್ಮಾಣ ಗುರಿ ಇರಿಸಿಕೊಳ್ಳಲಾಗಿದೆ ಎಂದುಅಧ್ಯಕ್ಷ ಸಂಜೀವ ಪೂಜಾರಿ ಹೇಳಿದರು. ಪ್ರಸ್ತಾಪಿತ ನಾರಾಯಣಗುರು ನಿಗಮ ಸ್ಥಾಪಿನೆ ಕುರಿತು ಮಹಾಮಂಡಲದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸುವುದಾಗಿ ನಿರ್ಣಯಿಸಲಾಯಿತು. ಉಪಾಧ್ಯಕ್ಷ ಶಿವಪ್ಪ ಸುವರ್ಣ ಸ್ವಾಗತಿಸಿದರು.
ಕಾರ್ಯದರ್ಶಿ ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಬೇಬಿ ಕುಂದರ್ ವಂದಿಸಿದರು. ನಿರ್ದೇಶಕರುಗಳಾದ ವಿಜಯಕುಮಾರ್ ಸೊರಕೆ, ಅಣ್ಣಿ ಯಾನೆ ನೋಣಯ್ಯ ಪೂಜಾರಿ , ಬಿ.ವಿಶ್ವನಾಥ, ಲಕ್ಷ್ಮಣ ಕೋಟ್ಯಾನ್,ರಾಜೇಶ್ ಸುವರ್ಣ, ಪುರುಷ.ಎನ್.ಸಾಲ್ಯಾನ್, ಆರ್.ಸಿ.ನಾರಾಯಣ, ಕೆ.ವಿಶ್ವನಾಥ ಪೂಜಾರಿ, ಕೆ.ವಿಶ್ವನಾಥ,ಪುಷ್ಪಾವತಿ, ಬಿ.ಎನ್.ಸನಿಲ್ ಉಪಸ್ಥಿತರಿದ್ದರು.


