ಬಂಟ್ವಾಳ: ಮಕ್ಕಳಿಗಾಗಿ ಕನ್ನಡ ಭಾಷೆ-ಸಾಹಿತ್ಯ ಕಾರ್ಯಾಗಾರ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಮೂಲಕ ಕನ್ನಡ ಭಾಷಾಪ್ರೇಮ, ಪುಸ್ತಕ ಪ್ರೀತಿ, ಓದು ಹಾಗೂ ಬರವಣಿಗೆಯ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಕನ್ನಡ ಭಾಷೆ-ಸಾಹಿತ್ಯ ಕಾರ್ಯಾಗಾರವನ್ನು ಸರಕಾರಿ ಪ್ರಾಢಶಾಲೆ ಸಾಲೆತ್ತೂರಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿ ಶ್ರೀಮತಿ ಮೈತ್ರಿ ಭಟ್ ಅವರು ಇತ್ತೀಚೆಗೆ ನಡೆಸಿದರು.

IMG-20190915-WA0027 (1) ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಪ್ರೀತಿಯನ್ನು ಮೂಡಿಸುವುದರೊಂದಿಗೆ, ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿ, ಬರವಣಿಗೆಯನ್ನು ರೂಢಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ 9 ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕನ್ನಡ ಸಾಹಿತ್ಯದ ಬಗ್ಗೆ ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ಪುಸ್ತಕಗಳನ್ನು ಬಹುಮಾನವಾಗಿ ನೀಡಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶಶಿಕಲಾಎಂ.ಎಸ್ ಮತ್ತು ಚಂದ್ರಾವತಿ ಹೆಚ್. ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *