ಬಂಟ್ವಾಳ: ವಿಶ್ವಕರ್ಮ ಸಮುದಾಯ ಭವನದ ನಿರ್ಮಾಣಕ್ಕೆ ಸರಕಾರದಿಂದ ಬರಬೇಕಾದ 25 ಲಕ್ಷ ಬಾಕಿ ಅನುದಾನವನ್ನು ಶೀಘ್ರವೇ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಿಳಿಸಿದ್ದಾರೆ. ತಾಲೂಕಿನ ಅಮ್ಟಾಡಿ ಗ್ರಾಮದ ಅಜೆಕಲದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ೨೬ನೇ ಸಾಮೂಹಿಕ ವಿಶ್ವಕರ್ಮ ಪೂಜಾ ಮಹೋತ್ಸವದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ, ಬಂಟ್ವಾಳ ತಾಲೂಕಿನ ವಿಶ್ವಕರ್ಮ ಸಮಾಜ ಬಾಂಧವರು ಸೇರಿಕೊಂಡು ಮೂರು ಕೋಟಿ ವೆಚ್ಚದ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಹೊರಟಿರುವ ಸಾಧನೆಯೇ ಅಭಿನಂದನೀಯವಾಗಿದೆ ಎಂದರು. ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಸಭಾಧ್ಯಕ್ಷತೆ ವಹಿಸಿದ್ದರು.
ಜ್ಯೋತಿಷಿ ಯೋಗೀಶ ಆಚಾರ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅಮ್ಟಾಡಿ ಪಂಚಾಯತ್ ಅಧ್ಯಕ್ಷ ಹರೀಶ ಶೆಟ್ಟಿ ಪಡು, ಬೋಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀರ್ಶ ಆಚಾರ್ಯ ಜಲಕದಕಟ್ಟೆ, ಲೋಕೇಶ್ ಆಚಾರ್ಯ ನಾಣ್ಯ, ಪುಷ್ಪಾ ಡಿ. ಆಚಾರ್ಯ, ನಾರಾಯಣ ಆಚಾರ್ಯ ಕಳ್ಳಿಗೆ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬುದ್ದಶಾಂತಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಶಿವಪ್ರಸನ್ನ ಆಚಾರ್ಯ, ಪಂಚಾಯತ್ ರಾಜ್ ಇಂಜಿನಿಯಿರಿಂಗ್ ಕಿರಿಯ ಅಭಿಯಂತರ ಕೃಷ್ಣ ಪತ್ತಾರ್, ರೀಜನ್ ಸಿಇಒ ವಿವೇಕ್ ಆಚಾರ್ಯ, ಜ್ಯೋತಿಷಿ ಮೋನಪ್ಪ ಆಚಾರ್ಯರವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ರಾಜ್ಯಮಟ್ಟದ ಬಾಲ್‌ಬ್ಯಾಡ್ಮಿಂಟನ್ ಕ್ರೀಡಾಪಟು ಕು. ಸೃಜನ್ ಆಚಾರ್ಯರವರಿಗೆ ಬಾಲಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯ ಬಳಿಕ ನಿತಿನ್ ಆಚಾರ್ಯ ಮತ್ತು ಬಳಗ ಕಲ್ಲಡ್ಕ, ವಿಶ್ವಕರ್ಮ ಸಮಾಜ ಸಂಘದ ಸದಸ್ಯರಿಂದ, ವಿಶ್ವಜ್ಯೋತಿ ಮಹಿಳಾ ಮಂಡಳಿಯ ಸದಸ್ಯರಿಂದ ಹಾಗೂ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಕಾರ್ಯದರ್ಶಿ ಸಂದೀಪ್ ಬಿ. ಆಚಾರ್ಯ ಭಂಡಾರಿಬೆಟ್ಟು ಸ್ವಾಗತಿಸಿದರು.ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ವಂದಿಸಿದರು. ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.
Attachments area

