ಪೊಳಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಆಶ್ರಯದಲ್ಲಿ ಪೊಳಲಿಯ ಮಾಧವ ಭಟ್ ಹಾಗೂ ಗಾಣದಪಡ್ಪು ನಾಗೇಶರ ಗದ್ದೆಯಲ್ಲಿ ಸೋಮವಾ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ನಡೆಯಿತು.

16vp polali yanthrikrtha batha nati
ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸಿ ಪ್ರಾತ್ಯಕ್ಷಿಕೆ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ ನಿರ್ದೇಶಕ ಸತೀಶ್ ಶೆಟ್ಟಿ ಯಾಂತ್ರೀಕೃತ ಭತ್ತದ ನಾಟಿ ಬಗ್ಗೆ ಮಾತನಾಡುತ್ತ, ಆಧುನಿಕತೆಯ ಭರಾಟೆ ಹಾಗೂ ಕೂಲಿಯಾಳುಗಳ ಕೊರತೆಯಿಂದ ಭತ್ತದ ಗದ್ದೆಗಳು ಹಡೀಲು ಬಿದ್ದಿವೆ. ಭತ್ತದ ಬೇಸಾಯ ಕಷ್ಟಎನ್ನುವವರೂ ಇದ್ದಾರೆ.

16vp1 yanthrikrtha bhatada nati

 

 

 

ಆದರೆ, ಯಾಂತ್ರೀಕೃತ ಭತ್ತದ ನಾಟಿಯಿಂದ ಕಡಿಮೆ ಅವಧಿಯಲ್ಲಿ ಬೇಸಾಯ ಮುಗಿಸಬಹುದು ಮತ್ತು ಸಾಕಷ್ಟು ಆದಾಯ ಗಳಿಸಬಹುದು. ಕೃಷಿ ಉಳಿಸಿ, ಬೆಳೆಸಬೇಕಾದರೆ ಹೆಚ್ಚೆಚ್ಚು ಮಂದಿ ಯಾಂತ್ರೀಕೃತ ಭತ್ತದ ಕೃಷಿ ಮಾಡಬೇಕು
ಎಂದರು. ಸಮಾರಂಭದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ಭಟ್, ಪದ್ಮನಾಭ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಂಬೆ ಕೇಂದ್ರ ಒಕ್ಕೂಟ ವಲಯದ
ಅಧ್ಯಕ್ಷ ಮಾಧವ ವಳವೂರು, ಸಿಎಚ್‍ಎಸ್‍ಇ ಪ್ರಾದೇಶಿಕ ಸಮನ್ವಯ ಅಧಿಕಾರಿ ಅಶೋಕ್, ತಾಪಂ ಸದಸ್ಯ ಯಶವಂತ ಕೋಟ್ಯಾನ್, ಮಲ್ಲಿಕಾ ಆಗ್ರೋ ವಾಯಿಲ್ಸ್ ಮಾಲಕ ಜಯರಾಮಕೃಷ್ಣ ಪೊಳಲಿ. ಉಪಸ್ಥಿತರಿದ್ದರು.DSC_2937

ಈ ಸಂದರ್ಭದಲ್ಲಿ ಕೃಷಿಕರನ್ನು ಗುರುತಿಸಿ ಚಾರ್ಲಿ ಡಿಸೋಜ, ನಾಗೇಶ್ ಗಾಣದಪಡ್ಪು, ಇಬ್ರಾಹಿಂ ಅಡ್ಡೂರುಅವರನ್ನು ಸನ್ಮಾನಿಸಲಾಯಿತು. ಸಂದೇಶ್ ಸ್ವಾಗತಿಸಿದರೆ, ಜನಾರ್ದನ ಪುಂಚಮೆ ವಂದಿಸಿದರು. ಧ.ಗ್ರಾ.ಅಭಿವೃದ್ಧಿ

ಯೋಜನೆಯ ತುಂಬೆ ವಲಯದ ಮೇಲ್ವಿಚಾರಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *