ಕೈಕಂಬ: `ಸಮಾಜದಲ್ಲಿನ ದಮನಿತರು, ಶೋಷಿತರು ಧೈರ್ಯದಿಂದ ಧ್ವನಿಯೆತ್ತಬೇಕು. ರಾಜಕೀಯ ಡೊಂಬರಾಟಕ್ಕೆ ಬಲಿಯಾಗದೆ, ರಾಜಕೀಯ ನಾಯಕರ ಕಪಿಮುಷ್ಠಿಯಲ್ಲಿ ನಲುಗದೆ ಸ್ವಾವಲಂಬಿಯಾಗಿ ಬದುಕಬೇಕು. ಶೋಷಿತರ ಆಶಾಕಿರಣವಾದ ಎಸ್ಡಿಪಿಐ ರಾಜಕೀಯ ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬಲವಾಗಿ ಬೆಳೆದು ದೇಶದ ರಾಜಕೀಯ ಇತಿಹಾಸದಲ್ಲಿ ದೃಢ ಹೆಜ್ಜೆಯನ್ನು ಊರಲಿದೆ’ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕೊಡ್ಲಿಪೇಟೆ ಹೇಳಿದರು. ಅವರು ಶುಕ್ರವಾರ ಕೈಕಂಬದಲ್ಲಿ ಜರಗಿದ ಸೋಷಿಯಲ್ ಡೆಮಾಕ್ರಟಿಕ್ ಪಾಟರ್ಿ ಆಫ್ ಇಂಡಿಯಾ ಇದರ ಮೂಲ್ಕಿ-ಮೂಡಬಿದ್ರೆ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತಾಡುತ್ತಿದ್ದರು.7 1 2 3 4 (1) 5 6 ಎಸ್ಡಿಪಿಐ ಮೂಲ್ಕಿ-ಮೂಡಬಿದ್ರೆ ಕ್ಷೇತ್ರ ಅಧ್ಯಕ್ಷ ಎ.ಕೆ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಜಲೀಲ್ ಕೆ. ಅವರು ಎಸ್ಡಿಪಿಐ ಪಕ್ಷದ ಸಾಧನೆ ಮತ್ತು ಗುರಿಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದಶರ್ಿ ರಿಯಾಝ್ ಫರಂಗಿಪೇಟೆ, ಎಸ್ಡಿಪಿಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ, ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಶೇಖುಂಙ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಷರ್ಾದ್ ಬಜ್ಪೆ ಅತಿಥಿಗಳನ್ನು ಸ್ವಾಗತಿಸಿ ಇಸ್ಮಾಯಿಲ್ ಇಂಜಿನಿಯರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾವೇಶಕ್ಕೂ ಮುನ್ನ ಜೋಕಟ್ಟೆ, ಬಜ್ಪೆ, ಮೂಡಬಿದ್ರೆ, ತೋಡಾರ್, ವಾಮಂಜೂರು, ಗುರುಪುರ ಮಾರ್ಗವಾಗಿ ವಾಹನ ಜಾಥಾ ನಡೆಯಿತು. ನೂರಾರು ಮಂದಿ ಎಸ್ಡಿಪಿಐ ಕಾರ್ಯಕರ್ತರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *