ಸುದ್ದಿ 9 ಕೈಕಂಬ: ಶ್ರೀ ಆದಿಶಕ್ತಿ ಚಾಮಂಡೇಶ್ವರೀ ದೇವಸ್ಥಾನದಲ್ಲಿ ಸೆ. 25 ಗುರುವಾರದಿಂದ ಮೊದಲ್ಗೊಂಡು ಅ.4ರ ಶನಿವಾರದವರೇಗೆ ನವರಾತ್ರಿ ಮಹೊತ್ಸವ ನಡೆಯಲಿದೆ ಎಂದು ಕ್ಷೇತ್ರಾಧಿಕಾರಿ ಸಂದೀಪ್ ತಿಳಿಸಿದ್ದಾರೆ.

images (3)

ಈ ಎಲ್ಲಾ ದಿನಗಳಲ್ಲಿ ಭಜನೆ ,ಮಹಾಪೂಜೆ ಆನ್ನಸಂತರ್ಪನೆ ಜರಗಲಿದೆ. ಅ.1ರಂದು ಬುಧವಾರ ರಾತ್ರಿ ಗಂಟೆ 10ರಿಂದ ಯಕ್ಷ ಚಿಗುರು, ಬೆಳ್ಳೂರು ಅರ್ಪಿಸುವ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಬಯಲಾಟ ಶಶಿಪ್ರಭಾ ಪರಿಣಯ- ಇಂದ್ರಜಿತು ಕಾಳಗ ನಡೆಯಲಿದೆ. ಅ.4ರಂದು ಶನಿವಾರ ಸಂಜೆ 7ಗಂಟೆಗೆ ಶಾರದಾಪೂಜೆ , ಜೈವೀರಮಾರುತಿ ವ್ಯಾಯಮಶಾಲೆ ಬಡಗಬೆಳ್ಳೂರು ಇವರಿಂದ ತಾಲೀಮು ಪ್ರದರ್ಶನ ಹಾಗೂ ವಿವಿಧ ವೇಶ ವಿನೋದಾವಳಿಗಳೊಂದಿಗೆ ಶಾರಾದಾ ಮಾತೆಯ ಶೋಭಾಯಾತ್ರೆ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ವಿಸರ್ಜಿಸಲಾಗುವುದು.

By Suddi9

Leave a Reply

Your email address will not be published. Required fields are marked *