ಬಂಟ್ವಾಳ: ಗ್ರಾಮೀಣ ಭಾಗದ ಪ್ರತಿಭೆಯೊಂದು ಬೆಂಗಳೂರಿನ ಕಲರ್ಸ್ ಕನ್ನಡ ಟಿ.ವಿಯ ಕಾಮಿಡಿ ಕಂಪೆನಿಯಲ್ಲಿ ಕಾಮಿಡಿ ನಟನಾಗಿ ಮಿಂಚುತ್ತಿದ್ದಾನೆ. ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಅತ್ತಾಜೆ ನಿವಾಸಿ ಚಂದಪ್ಪ ಪೂಜಾರಿ ಹಾಗೂ ತೇಜಾಕ್ಷಿ ಅವರ ಪುತ್ರ ಸಚಿನ್ ಅತ್ತಾಜೆ ಅವರು ಮಿಂಚುತ್ತಿರುವ ಕಾಮಿಡಿ ನಟ.
ನಾಟಕದಿಂದ ನಟನೆಯತ್ತ ಹೆಜ್ಜೆಹಾಕಿದ ಸಚಿನ್ ಅವರು ಪ್ರಸ್ತುತ ಕಲರ್ಸ್ ಕನ್ನಡದ ಕಾಮಿಡಿ ಕಂಪನಿಯಲ್ಲಿ ಒಬ್ಬ ಅಪ್ರತಿಮ ಕಾಮಿಡಿ ನಟನೆಯ ಮೂಲಕ ಜನರ ಮನರಂಜಿಸುತ್ತಿದ್ದಾರೆ.
ಕೇವಲ 8 ನೇ ಕ್ಲಾಸು ಕಲಿತ ಹಳ್ಳಿ ಹುಡುಗಕಷ್ಟದ ಜೀವನಕ್ಕಾಗಿ ಅರ್ಧದಲ್ಲಿ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಜೀವನದ ರಥ ಸಾಗಿಸಲು ಆಯ್ಕೆ ಮಾಡಿದ್ದು ಕೂಲಿ ಕೆಲಸ.
ಕಟ್ಟಡ ನಿರ್ಮಾಣದ ಮೇಸ್ತ್ರಿ ಕೆಲಸಗಾರರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.ನಾಟಕ ಅಭಿಯನದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಸಚಿನ್ ಅವರ ಮುಂದಿನ ದಿನಗಳು ವರ್ಣರಂಜಿತ.
ಪುಂಜಾಲಕಟ್ಟೆ ಎಂಬುದು ರಾಜಕೀಯ , ಕಲೆ, ಸಾಹಿತ್ಯ, ಸಾಮಾಜಿಕ , ಹೋರಾಟ ಹೀಗೆ ಅನೇಕ ತಾಣಗಳ ತವರೂರು.
ಹಾಗಾಗಿ ಅನೇಕ ಕಲೆಗಳಿಗೆ ಪ್ರೋತ್ಸಾಹ ನೀಡುವ ಅನೇಕ ಸಂಘಸಂಸ್ಥೆಗಳು ಇಲ್ಲಿವೆ.
ಸಚಿನ್ ಕೂಡಾ ಇಲ್ಲಿಂದಲೇ ತನ್ನ ನಟನೆಗೆ ಹೆಜ್ಜೆ ಹಾಕಿದ್ದು.
ಪುಂಜಾಲಕಟ್ಟೆಯ ಮುರುಘೇಂದ್ರ ಮಿತ್ರಮಂಡಳಿಯವರ ನಾಟಕ ತಂಡದಲ್ಲಿ ರತ್ನ ದೇವ್ ಪುಂಜಾಲಕಟ್ಟೆಯವರ ನಿರ್ದೇಶನದ ಅಜ್ಜಿಗ್ ಏರಲಾ ಇಜ್ಜಿ ಎಂಬ ನಾಟಕದಲ್ಲಿ ಪ್ರಥಮವಾಗಿ ಕಾಮಿಡಿ ನಟನಾಗಿ ರಂಗಪ್ರವೇಶ ಮಾಡಿದ ಈತ ಬಳಿಕ ” ತಾಂಬೂಲ” ಕೈಕಂಬದ “ವಿಧಾತ್ರಿ” ತಂಡದಲ್ಲಿ ಕಾಮಿಡಿ ನಟನಾಗಿ ಮಿಂಚುತ್ತಿರುವಾಗಲೇ ಅತನಿಗೆ ಕಲರ್ಸ್ ಕನ್ನಡ ಕಾಮಿಡಿ ಕಂಪೆನಿಯಲ್ಲಿ ನಟನೆಗೆ ಅವಕಾಶ ಸಿಕ್ಕಿದೆ.
ಇದರ ಜೊತೆಗೆ ಈತ ಎರಡು ತುಳು ಸಿನೆಮಾದಲ್ಲೂ ನಟನೆ ಮಾಡಿದ್ದು, ಇನ್ನೇನು ಈ ಚಿತ್ರಗಳು ಬಿಡುಗಡೆಗೆ ಮಾತ್ರ ಬಾಕಿ ಉಳಿದಿದೆ.
ಅಲ್ಲದೆ ಮಂತ್ರದೇವತೆ ಕ್ರಿಯೇಷನ್ ನವರ ಅಲ್ಬಮ್ ಸಾಂಗ್ ಹಾಗೂ ಟೆಲಿ ಪಿಲ್ಮಿನಲ್ಲಿಯೂ ಈತ ಕಾಮಿಡಿ ನಟನಾಗಿ ಅಭಿನಯಿಸಿದ ಒಬ್ಬ ಅತ್ಯುತ್ತಮ ಕಲಾವಿದ.
ಈತನ ನಟನೆಯನ್ನು ಗುರುತಿಸಿ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಸಹಿತ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ.

