ಬಂಟ್ವಾಳ: ತಾಲ್ಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿನಲ್ಲಿ ಶುಕ್ರವಾರ ನಡೆದ’ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧರ್ಮರಾಜ ಡಿ. ಇವರು ಉದ್ಘಾಟಿಸಿದರು.

ಗ್ರಾ.ಪಂ.ಅಧ್ಯಕ್ಷೆ ಮೋಹಿನಿ ಹರೀಶ್, ಸಮನ್ವಯ ಸಮಿತಿ ಅಧ್ಯಕ್ಷ ಆನಂದ ಆಚಾರ್ಯ, ಇಲಾಖೆ ಮೇಲ್ವಿಚಾರಕಿ ಗೀತಾ, ಕಿರಿಯ ಆರೋಗ್ಯ ಸಹಾಯಕಿ ಲತಾ, ಆರೋಗ್ಯ ಮಿತ್ರ ಚರಣ್, ಸ್ತ್ರೀ ಶಕ್ತಿ ಅಧ್ಯಕ್ಷೆ ಉಮಾವತಿ, ಸುರೇಶ್ ನಾಯಕ್ ಉರುಡಾಯಿ ಮತ್ತಿತರರು ಇದ್ದರು.
