ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದಲ್ಲಿ ಗುರುವಾರ ಆರಂಭಗೊಂಡ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಅಧಿಕಾರಿ ಕೆ.ಆನಂದ ಉದ್ಘಾಟಿಸಿದರು. ಪ್ರಮುಖರಾದ ಈಶ್ವರ ಭಟ್ ಮಾದಕಟ್ಟೆ, ವಿಶ್ವನಾಥ ಗಾಣದಪಡ್ಪು, ಕೃಷ್ಣ ಕುಲಾಲ್, ಜಗನ್ನಾಥ ಶೆಟ್ಟಿ, ಮಾಧವ ಕುಲಾಲ್, ಗಿರಿಧರ ಪ್ರಭು, ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

