ಬಂಟ್ವಾಳ: ದೈವ ಪ್ರೇರಣೆಯಂತೆ ನಾಣ್ಯ ಶ್ರೀ ನಾಗರಕ್ತೇಶ್ವರಿ ಕ್ಷೇತ್ರ ದಲ್ಲಿ  ನಾಗ ಮಂಡಲ ಸೇವೆಯು ಅಭೂತಪೂರ್ವ ವಾಗಿ ನಡೆಯುವುದು ನಿಶ್ಚಿತ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ  ಸ್ವಾಮೀಜಿ ನುಡಿದಿದ್ದಾರೆ.     2020 ಜನವರಿ 16 ರಂದು ಬಂಟ್ವಾಳ ತಾ.ನ ಪುದು ಗ್ರಾಮದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರದಲ್ಲಿ ನಡೆಯಲಿರುವ ನಾಗಮಂಡಲೋತ್ಸವದ ಪ್ರಯುಕ್ತ  ಭಾನುವಾರ ಶ್ರೀಕ್ಷೇತ್ರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶ್ರೀಗಳು ಭಾಗವಹಿಸಿ ಮಾರ್ಗ ದರ್ಶ ನೀಡಿದರು. ನ ಪುರಾತನ ಇತಿಹಾಸವುಳ್ಳ ಈ ಕ್ಷೇತ್ರವು ಕಾರುಣಿಕದ ಕ್ಷೇತ್ರವಾಗಿ ಬೆಳಗುವ ಎಲ್ಲಾ ಕುರುಹುಗಳು ಗೋಚರಿಸುತ್ತಿದ್ದು, ನಾಗ ಮಂಡಲ  ಕೂಡ ಅತ್ಯಂತ ಯಶಸ್ವಿಯಾಗಿ ನಡೆಯುವುದರಲ್ಲಿ ಸಂಶಯವಿಲ್ಲ ಎಂದರು.  ನಾಗಮಂಡಲದ ಮೂಲಕ ಸಮಾಜದ ವೈರುಧ್ಯಗಳು ನಾಶವಾಗಿ ಉತ್ತಮ ಸಮಾಜ ನಿರ್ಮಾಣ ವಾಗಲಿದೆ ಎಂದು ಶ್ರೀಗಳು ಆಶಿಸಿದರು.IMG-20190908-WA0054

ಅಷ್ಟ ಪವಿತ್ರ ನಾಗ ಮಂಡಲ ಸಮಿತಿಯ ಪ್ರದಾನ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪುದು , ತುಂಬೆ , ಕಳ್ಳಿಗೆ , ಕೊಡ್ಮನ್ , ಮೇರಮಜಲು,  ಅರ್ಕುಳ ಒಟ್ಟು ಆರು ಗ್ರಾಮ ಗಳನ್ನು ಸೇರಿಸಿಕೊಂಡು ,12 ವಲಯ ಗಳನ್ನು ರಚಿಸಲಾಗಿದೆ , ಸುಮಾರು  24   ಉಪವಲಯಗಳ ಸಭೆ ನಡೆಸಿ , ಗ್ರಾಮದ  ಎಲ್ಲಾ  ದೇವಸ್ಥಾನ , ದೈವಸ್ಥಾನ , ಭಜನಾ ಮಂದಿರ , ಯುವಕ ಮಂಡಲ , ಮಹಿಳಾ ಮಂಡಲಗಳ   ಪ್ರಮುಖರನ್ನು ಸಂಚಾಲಕರನ್ನಾಗಿಸಿಕೊಂಡು ಸಮಿತಿ ರಚಿಸಲಾಗಿದೆ ಎಂದರು

ಶ್ರೀಧಾಮ ಮಾಣಿಲದ  ಶ್ರೀ ಮೋಹನದಾಸ ಪರಮಹಂಸ  ಸ್ವಾಮೀಜಿ ಗೌರವ ಮಾರ್ಗದರ್ಶಕರನ್ನಾಗಿ ಆಯ್ಕೆಗೊಳಿಸಲಾಯಿತು. ಐತಪ್ಪ ಆಳ್ವ ಸುಜೀರುಗುತ್ತು ( ಗೌರವಾಧ್ಯಕ್ಷರು),  ಪ್ರಕಾಶ್ಚಂದ್ರ ರೈ ದೇವಸ್ಯ (ಅಧ್ಯಕ್ಷ),     ಚಂದ್ರಹಾಸ್ ಶೆಟ್ಟಿ ರಂಗೋಲಿ(ಕಾರ್ಯಾಧ್ಯಕ್ಷರು), ಪ್ರದಾನ ಸಂಚಾಲಕರಾಗಿ  ತೇವು ತಾರಾನಾಥ ಕೊಟ್ಟಾರಿ, ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ,  ಗೌರವ ಸಲಹೆಗಾರರಾಗಿ ವಜ್ರನಾಭ ಶೆಟ್ಟಿ ಅರ್ಕುಳ ಬೀಡು , ರಾಮಕೃಷ್ಣ ಚೌಟ ಸುಜೀರ್ ಗುತ್ತು , ಜಿ ಜಿ ಮೋಹನದಾಸ್ ಪ್ರಭು ,  ಸದಾನಂದ ಆಳ್ವ ಕಂಪ , ಜಗನ್ನಾಥ್ ಚೌಟ , ರಾಜಶೇಖರ್ ರೈ ಕಳ್ಳಿಗೆ , ಜಯರಾಮ್ ಸಾಮಾನಿ ತುಂಬೆ , , ಅರುಣ್ ಆಳ್ವ ತುಂಬೆ ಗುತ್ತು , ಭಾಸ್ಕರ ಚೌಟ ಕುಂಭ್ಡೇಲ್ , ಪ್ರಕಾಶ್ ಶೆಟ್ಟಿ ತುಂಬೆ,  ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ , ವಿವೇಕ್ ಆಳ್ವ ಕೊಡ್ಮಾಣ್ , , ರಾಮದಾಸ್ ಕೋಟ್ಯಾನ್ ಮಜಿ , ರಾಮಚಂದ್ರ ಬಂಗೇರ ಭಗವತಿ , ಶಿವರಾಮ ಶೆಟ್ಟಿ ತೇವು ಗುತ್ತು, ಹರೀಶ್ ಶೆಟ್ಟಿ ನಾಲದೆ , ಗಣೇಶ್ ಸುವರ್ಣ ತುಂಬೆ , ಲೋಕನಾಥ ಆಚಾರ್ಯ ದೆಕ್ಕೇದು ,    ಉಪಾಧ್ಯಕ್ಷರು , ಕಾರ್ಯದರ್ಶಿಗಳಲ್ಲದೆ ಉಪಸಮಿತಿಗಳನ್ನು ರಚಿಸಲಾಯಿತು.

ಕ್ಷೇತ್ರದ ತಂತ್ರಿ ಗಳಾದ ಪೊಳಲಿ ಸುಬ್ರಮಣ್ಯ ತಂತ್ರಿ , ರಾಮಚರಣ್ ತಂತ್ರಿ  ಕೊಡ್ಮಣ್ಣು ಕಾಂತಪ್ಪ ಶೆಟ್ಟಿ ,   ಐತಪ್ಪ ಆಳ್ವ ಸುಜೀರುಗುತ್ತು , ಪ್ರಕಾಶ್ಚಂದ್ರ ರೈ ದೇವಸ್ಯ ಸದಾನಂದ ಆಳ್ವ ಕಂಪ,  ವಜ್ರನಾಭ ಶೆಟ್ಟಿ ಅರ್ಕುಳ ಬೀಡು,   ಭಾಸ್ಕರ ಚೌಟ ಕುಂಭ್ಡೇಲ್,  ವಿವೇಕ್ ಆಳ್ವ ಕೊಡ್ಮಾಣ್,  ರಾಮಚಂದ್ರ ಬಂಗೇರ ಭಗವತಿ, ರವೀಂದ್ರ ಕಂಬಳಿ , ಶಶಿರಾಜ್ ಶೆಟ್ಟಿ ಕೊಳಂಬೆ ,  ಜಿ ಜಿ ಮೋಹನದಾಸ್ ಪ್ರಭು, ಚಂದ್ರಶೇಖರ ಗಾಂಭೀರ ಸುಜೀರ್ ಗುತ್ತು , ಅರುಣಕುಮಾರ್ ಶೆಟ್ಟಿ ನುಲಿಯಾಳ್ ಗುತ್ತು , ಪೂವಪ್ಪ ಬಂಗೇರ ನಾಣ್ಯ , ಸುಬ್ರಮಣ್ಯ ರಾವ್ ಮತ್ತಿತರರು ವೇದಿಕೆಯಲ್ಲಿದ್ದರು

 

By Suddi9

Leave a Reply

Your email address will not be published. Required fields are marked *