ಬಂಟ್ವಾಳ :ಕ್ರಿಯಾಶೀಲತೆಯ ಗುಣ ನಮ್ಮಲ್ಲಿದ್ದಾಗ ಧಾರ್ಮಿಕ ಆಚರಣೆಗಳನ್ನು ಮಾಡಲು ಸಾಧ್ಯ .ಪರಿಶುದ್ಧವಾದ ಮನಸ್ಸು ನಮ್ಮಲ್ಲಿದ್ದಾಗ ದೇವರ ಹತ್ತಿರವಾಗಲು ಸಾಧ್ಯ. ನಾವು ನಮ್ಮನ್ನು ಬೆಳೆಸುವ ಜತೆ ಸಮಾಜವನ್ನು ಬೆಳೆಸುವ ಜವಾಬ್ದಾರಿಯಿಂದ ಮುನ್ನಡೆಯಬೇಕಾಗಿದೆ .
ಸಂತೋಷವನ್ನು ನಾವು ಅನುಭವಿಸಬೇಕಾದರೆ ಇರುವ ಸಂಪತ್ತಿನಲ್ಲಿ ನೆಮ್ಮದಿಯನ್ನು ಕಾಣಬೇಕು ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಯ ಆಶ್ರಯದಲ್ಲಿ ದಾಸ ರೈ ಮೈದಾನ ಜಕ್ರಿಬೆಟ್ಟುವಿನಲ್ಲಿ ಜರಗಿದ 3ನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು . ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮುಂಬಯಿ ಭವಾನಿ ಶಿಪ್ಪಿಂಗ್ ಕಂಪನಿಯ ಕುಸುಮಾಧರ ಡಿ.ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಪ್ರದೀಪ್ ಕುಮಾರ್ ಕಲ್ಕೂರ, ಬೆಂಗಳೂರು ನಿರ್ಮಾಣ್ ಕನ್ಟ್ರಕ್ಷನ್ ಆಡಳಿತ ನಿರ್ದೇಶಕ ಉದಯ ಹೆಗಡೆ, ಸಮಿತಿ ಅಧ್ಯಕ್ಷ ಪದ್ಮಶೇಖರ ಜೈನ್ ಉಪಸ್ಥಿತರಿದ್ದರು. ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು ಸ್ವಾಗತಿಸಿದರು. ಪುರಸಭಾ ಸದಸ್ಯ ವಾಸು ಪೂಜಾರಿ ಲೊರೆಟ್ಟೋ ವಂದಿಸಿ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.
