ಕೈಕಂಬ ಗಣೇಶೋತ್ಸವದ 36ನೇ ವರ್ಷದ ಸಮಾರೋಪ ಸಮಾರಂಭ ಕೈಕಂಬದ ಬೆನಕ ವೇದಿಕೆಯಲ್ಲಿ ನಡೆಯಿತು. ಎಂ.ಜಗನ್ನಾಥ್ ಕಾಮತ್ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಕ್ಷಿಪ್ರಫಲದಾಯನಾದ ಗಣೇಶ ರಾಷ್ಟ್ರಚಿಂತನೆಯ ದೇವರು ಎಂಬುದಾಗಿ ಬಿಂಬಿಸಿದರು. ವೇದಮೂರ್ತಿ ಶ್ರೀಪತಿ ಆಚಾರ್ಯ ಆಶೀರ್ವಚನ ನೀಡಿದರು.
ಪ್ರಧಾನ ಉಪನ್ಯಾಸ ನೀಡಿದ ಕೇಶವ ಬಂಗೇರರು ರಾಷ್ಟ್ರಚಿಂತನೆ ಸಮಷ್ಠಿ ಚಿಂತನೆಯನ್ನು ಬೆಳೆಸಿಕೊಳ್ಳುವಂತೆ ಕರೆನೀಡಿದರು.ಮುಖ್ಯ ಅತಿಥಿಗಳಾಗಿ ಕೇಶವ ಆಚಾರ್ಯ, ಚಂದ್ರಹಾಸ ರೈ ವಾಮಂಜೂರು, ಸತೀಶ್ಚಂದ್ರ ಎನ್.ಎಸ್, ವಿದ್ಯಾಕಾಮತ್ ಭಾಗವಹಿಸಿದ್ದರು. ಸಮಿತಿಯ ಅಧ್ಯಕ್ಷರಾದ ವಿನೋದ್ ಮಾಡ ಸ್ವಾಗತಿಸಿದರು. ಸುರೇಶ್ ಎ.ಜಿ. ಪ್ರಾರ್ಥನೆ ಮಾಡಿದರು. ಶ್ರೀಧರ್ ರಾವ್ ವಂದಿಸಿದರು. ಕಾರ್ಯದರ್ಶಿ ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಜಾನನ ಭಟ್, ಶಶಿಕಾಂತ್ ಸಿ.ಎಚ್,ವೇಣುಗೋಪಾಲ್ ಸಹಕರಿಸಿದರು.
