ತುಂಬೆ: ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ವು ತುಂಬೆ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡೆ ಎಂಬುದು ಮನುಷ್ಯನ ಜೀವನವನ್ನು ರೂಪಿಸಲು ಸಹಕಾರಿಯಾಗುತ್ತದೆ. ಶಾಂತಿ ಸೌಹಾರ್ದತೆಯನ್ನು ಕಲಿಸಿ ಕೊಡುತ್ತದೆ. ವಿದ್ಯಾ ಜೀವನದ ಕ್ರೀಡಾ ಚಟುವಟಿಕೆಗಳು ಮುಂದಿನ ಸವಿನೆನಪುಗಳಾಗುತ್ತವೆ ಎಂಬುದಾಗಿ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ್ ಹೇಳಿದರು. ಅವರು ಇಂದು ಪದವಿ ಪೂರ್ವ ಶಿಕ್ಷಣ ಇಲಾಖೆ, ಬಂಟ್ವಾಳ ರೋಟರಿ ಕ್ಲಬ್ ಹಾಗೂ ತುಂಬೆ ಪದವಿ ಪೂರ್ವ ಕಾಲೇಜು ಜಂಟಿಯಾಗಿ ತುಂಬೆ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಬಂಟ್ವಾಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂಟ್ವಾಳ ರೋಟರಿ ಕ್ಲಬ್ ಉಪಾಧ್ಯಕ್ಷ ಕೆ. ಎನ್. ಹೆಗ್ಡೆ ಮಾತನಾಡಿ ಸೋಲು-ಗೆಲುವುಗಳು ಮುಖ್ಯವಾಗದೆ ಪ್ರತಿಯೊಬ್ಬ ವಿದ್ಯಾರ್ಥಿ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನೂ ವಹಿಸಿದ್ದ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವ ಮಾತನಾಡುತ್ತಾ, ಕ್ರೀಡಾ ಸ್ಪೂರ್ತಿಯೇ ಜೀವನಕ್ಕೆ ಸ್ಪೂರ್ತಿಯಾಗಬಲ್ಲುದು. ಉತ್ಸಾಹವೇ ಯಶಸ್ಸಿಗೆ ನಾಂದಿಯಾಗುತ್ತದೆ. ದ್ವೇಷ ಅಸೂಯೆ ದೂರವಾಗಿ ಸಾಮರಸ್ಯದ ಬದುಕಿಗೆ ಕ್ರೀಡೆ ಕಾರಣವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇನ್ನೋರ್ವ ಅತಿಥಿ ಬಂಟ್ವಾಳ ಕೆ.ಡಿ.ಪಿ. ಸದಸ್ಯ ಉಮೇಶ್ ಬೋಳಂತೂರು, ತುಂಬೆ ಪ್ರೌಢಶಾಲಾ ವಿಭಾಗ ಮುಖ್ಯಸ್ಥ ಶ್ರೀ ಶ್ರೀನಿವಾಸ್ ಕೆದಿಲ, ಕಾಲೇಜಿನ ಆಡಳಿತಾಧಿಕಾರಿ ಕಿಶೋರ್ ಕುಮಾರ್, ಕಛೇರಿ ಅಧೀಕ್ಷಕ ಅಬ್ದುಲ್ ಕಬೀರ್, ದೈಹಿಕ ಶಿಕ್ಷಕಿ ಮೋಲಿ ಎಡ್ನಾ ಗೋನ್ಸಾಲ್ವಿಸ್ ಮೊದಲಾದವರು ಉಪಸ್ಥಿತರಿದ್ದರು ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಉಪನ್ಯಾಸಕ ವಿ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಕಾಲೇಜು ದೈಹಿಕ ಶಿಕ್ಷಣ ನಿರ್ಧೇಶಕ ಸಾಯಿರಾಂ ನಾಯಕ್ ವಂದಿಸಿ, ದೈಹಿಕ ಶಿಕ್ಷಕ ಶಿಕ್ಷಣ ಜಗದೀಶ್ ರೈ ಕಾರ್ಯಕ್ರಮ ನಿರೂಪಿಸಿದರು.
