ರಾಯಲ್ಪಾಡು : ಗ್ರಾಮೀಣ ಭಾಗದ ಶಾಲೆಗಳಲ್ಲಿನ ಶಿಕ್ಷಕರು ಗ್ರಾಮೀಣ ಸೊಗಡನ್ನು ಹೊರಮ್ಮಿಸುವ ವೈವಿದ್ಯಮಯವಾದ ಕಲೆಗಳಿಗೆ ಹೆಚ್ಚು ಒತ್ತುನೀಡವುದರಿಂದಾಗಿ ಗ್ರಾಮೀಣ ಭಾಗದ ಕೆಲ ಪುರಾತನವಾದ ಕಲೆಗಳಿಗೆ ಜೀವ ತುಂಬಿದಂತಾಗುತ್ತದೆ ಎಂದು ಸಿಆರ್‍ಪಿ ಸಿ.ಮುನಿಯಪ್ಪ ತಿಳಿಸಿದರು . ರಾಯಲ್ಪಾಡು ಹೋಬಳಿಯ ಗೌನಿಪಲ್ಲಿ ಪ್ರಾಥಮಿಕ ಶಾಲಾವರಣದಲ್ಲಿ ಗುರುವಾರ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ,
ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರ್ತಿಸಿ ಆ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹವನ್ನು ನೀಡಬೇಕು . ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸತತ ಪ್ರಯತ್ನದಿಂದ ಉತ್ತಮವಾಗಿ ಪ್ರದರ್ಶಿಸಿ ಅವಕಾಶ ಸಿಕ್ಕ ವೇದಿಕೆಯನ್ನು ಸದಪಯೋಗಪಡಿಸಿಕೊಂಡು , ಸೋಲು ಗೆಲಿವಿನ ಲೆಕ್ಕಾಚಾರವನ್ನು ಬಿಟ್ಟು ಉತ್ತಮ ಪ್ರದರ್ಶನದೊಂದಿಗೆ ಸಮಾಜವು ಪ್ರತಿಭೆಯನ್ನು ಗುರ್ತಿಸುವಂತಗಾಬೇಕು ಎಂದರು.rpd ---photo --1

ಗ್ರಾಮದ ಮುಖಂಡರಾದ ಸಲ್ಲಪ್ಪ ಮಾತನಾಡಿ ನಗರ ಪ್ರದೇಶಗಲ್ಲಿನ ವಿದ್ಯಾರ್ಥಿಗಳಂತೆ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುವಂತಹ ಪ್ರತಿಭೆಗಳು ಇರುತ್ತಾರೆ. ನಗರ ಪ್ರದೇಶದಲ್ಲಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೆಚ್ಚು ಅವಕಾಶಗಳು ದೊರೆಯುತ್ತಲೇ ಇರುತ್ತವೆ. ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ಪ್ರತಿಭೆ ಇದ್ದರೂ ವೇದಿಕೆಯ ಕೊರತೆಯಿಂದಾಗಿ ಅವಕಾಶವಂಚಿತಾರಾಗುತ್ತಿದ್ದಾರೆ .ಆದ್ದರಿಂದ ಗ್ರಾಮೀಣ ಭಾಗದ ಪ್ರತಿಭೆಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸುವಂತಾಗಬೇಕು ಎಂದು ಸಲಹೆ ನೀಡಿದರು .

ಕ್ಲಸ್ಟರ್‍ನ ಶಿಕ್ಷಕರಾದ ಕೆ.ಎಸ್.ಕೋದಂಡರಾಮಯ್ಯ, ಜಿ.ಆರ್.ನಾರಾಯಣಮೂರ್ತಿ, ಸಿ.ವಿ.ನಾರಾಯಣಸ್ವಾಮಿ, ಜಿ.ಎಸ್.ಶಾಂತಕುಮಾರಿ,ಟಿ.ಎನ್. ನಂಜುಂಡಾಚಾರಿ,ಟಿ.ಎನ್. ಸುಜಾತ್, ಜಿ.ಆರ್.ರಮೇಶ್,ಜಿ.ವಿ. ಸುಬ್ರಮಣಿ,ಜಿ.ಮಲ್ಲಿಕಾರ್ಜುನ,ಎನ್.ಶಿವಣ್ಣ,ಜಿ.ಶಾನು,ಟಿ.ಜಿ.ರಾಜೇಶ್‍ಖನ್ನಾ,ಕೆ.ಶಂಕರ,ವಿ.ಕೃಷ್ಣಾರೆಡ್ಡಿ,ಆರ್.ವೆಂಕಟನಾರಾಯಣ,ಕೆ.ಎಂ.ಸುಧಾಕರ ಹಾಜರಿದ್ದರು.

By Suddi9

Leave a Reply

Your email address will not be published. Required fields are marked *