ಕೋಲಾರ:ಕಾಲೇಜುಗಳ ಹಂತದಲ್ಲಿ ಆಗಿರುವ ಶೈಕ್ಷಣಿಕ ಮತ್ತು ಭೌತಿಕ ಸ್ಥಿತಿಗತಿಗಳ ಪರಿಶೀಲನೆಗೆ ರಾಷ್ಟ್ರೀಯ ಸ್ವಯಂ ಮೌಲ್ಯಮಾಪನ ತಂಡ ಬರುವುದರಿಂದ ಸೂಕ್ತ ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಕೆ.ಆರ್.ರಮೇಶ್‍ಬಾಬು ಸಲಹೆ ನೀಡಿದರು .ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ಒಂದು ದಿನದ ಅಂತರಕಾಲೇಜು `ಸ್ವಯಂಮೌಲ್ಯಮಾಪನ ವರದಿ ತಯಾರಿ’ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.1 (1)

ಎನ್‍ಎಕೆ(ರಾಷ್ಟ್ರೀಯ ಸ್ವಯಂ ಮೌಲ್ಯಮಾಪನ ಸಮಿತಿ ಐದು ವರ್ಷಗಳಿಗೊಮ್ಮೆ ಬರುತ್ತಿದ್ದು, ಕಾಲೇಜಿನ ಸ್ಥಿತಿಗತಿಗಳ ಅಧ್ಯಯನ ನಡೆಸಿ ನೀಡುವ ವರದಿಯಂತೆ ಕಾಲೇಜಿಗೆ ಗ್ರೇಡ್ ನೀಡುವುದರಿಂದ ಗಂಭೀರವಾಗಿ ಪರಿಗಣಿಸಿ, ಕಾಲೇಜು ಹಂತದಲ್ಲಿ ನಡೆಸಬೇಕಾದ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ತಾಕೀತು ಮಾಡಿದರು.ಬೆಂಗಳೂರಿನ ಜಯನಗರ ಪ್ರಥಮ ದರ್ಜೆ ಕಾಲೇಜು ಆಂಗ್ಲ ವಿಭಾಗದ ಮುಖ್ಯಸ್ಥ ವಿ.ಶೇಷಗಿರಿ ಸ್ವಯಂ ಮೌಲ್ಯಮಾಪನ ವರದಿ ತಯಾರಿ ಕುರಿತು ವಿಶೇಷ ಉಪನ್ಯಾಸ ನೀಡಿ, ನ್ಯಾಕ್ ಸಮಿತಿ ಕಳೆದ ಐದು ವರ್ಷಗಳಲ್ಲಿ ಶೈಕ್ಷಣಿಕ ಗುಣಮಟ್ಟ, ಕಾಲೇಜಿನ ಮೂಲಸೌಲಭ್ಯಗಳು, ಭೌತಿಕ ಸೌಲಭ್ಯಗಳ ಅಭಿವೃದ್ದಿಗೆ ಕೈಗೊಂಡಿರುವ ಕ್ರಮಗಳು ಹಾಗೂ ಅವುಗಳ ನಿರ್ವಹಣೆ ಕುರಿತು ಗಮನ ಹರಿಸುತ್ತದೆ ಎಂದರು.30kolar1

ಜತೆಗೆ ಕಾಲೇಜು ಹಂತದಲ್ಲಿ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ನೀಡಿರುವ ಪ್ರಾಧಾನ್ಯತೆ, ನಡೆಸಿರುವ ಕಾರ್ಯಕ್ರಮಗಳ ಕುರಿತು ಗಮನಹರಿಸಿ ವರದಿ ತಯಾರಿಸುತ್ತದೆ ಎಂದರು.ನ್ಯಾಕ್ ಕಮಿಟಿ ಬರುವ ಮುನ್ನವೇ ಶೈಕ್ಷಣಿಕ ಮತ್ತು ಭೌತಿಕ ಸೌಲಭ್ಯಗಳ ಅಭಿವೃದ್ದಿಗೆ ಕೈಗೊಂಡಿರುವ ಕ್ರಮಗಳ ಕುರಿತು ಸುದೀರ್ಘವಾದ ವರದಿಯನ್ನು ಕಾಲೇಜು ಹಂತದಲ್ಲಿಮೊದಲೇ ಸಿದ್ದಪಡಿಸಿಕೊಂಡಿರಬೇಕು ಎಂದರು.ನ್ಯಾಕ್ ಸಮಿತಿ ಬಂದಾಗ ವಹಿಸಬೇಕಾದ ಎಚ್ಚರಿಕೆ ಕ್ರಮಗಳು, ಸ್ವಯಂ ಮೌಲ್ಯಮಾಪನ ವಿಧಾನ, ವರದಿ ತಯಾರಿಕೆ ಮತ್ತಿತರ ಕ್ರಮಗಳ ಕುರಿತು ಅವರು ಭಾಗವಹಿಸಿದ್ದ ಹಲವಾರು ಕಾಲೇಜುಗಳ ಮುಖ್ಯಸ್ಥರಿಗೆ ಮಾಹಿತಿ ಒದಗಿಸಿದರು.ಕಾರ್ಯಾಗಾರದಲ್ಲಿ ಕೋಲಾರದ ಮಹಿಳಾ ಕಾಲೇಜು,ಕಾನೂನು ಕಾಲೇಜು, ಬಾಗೇಪಲ್ಲಿ ಪ್ರಥಮ ದರ್ಜೆ ಕಾಲೇಝು, ಕೆಜಿಎಫ್ ಪ್ರಥಮ ದರ್ಜೆ ಕಾಲೇಜುಗಳ ಬೋಧಕ,ಬೋಧಕೇತರ ಸಿಬ್ಬಂದಿ ಸೇರಿದಂತೆ 130ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ವಹಿಸಿದ್ದು, ಕಾಲೇಜು ಶಿಕ್ಷಣ ಇಲಾಖೆ ನ್ಯಾಕ್ ರಾಜ್ಯ ಸಮಿತಿ ಸಂಯೋಜಕಾದ ಮಹೇಶ್, ಗೌರಿನಾಯ್ಡು, ಕಾಲೇಜಿನ ಪ್ರಾಧ್ಯಾಪಕರಾದ ಸುಜಾತಾ, ಹೇಮಮಾಲಿನಿ, ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *