ಬಂಟ್ವಾಳ: ಪಿಲಾತಬೆಟ್ಟು ಗ್ರಾಮ ಪಂಚಾಯತ್ ಹಾಗೂ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಇವರ ಸಹಭಾಗಿತ್ವದಲ್ಲಿ  ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಹಾಗೂ ಮೂರು ಶಾಲೆಗಳಿಗೆ  ಸುಮಾರು  4 ಲಕ್ಷ. ರೂ. ವೆಚ್ಚದಲ್ಲಿ ಪೀಠೋಪಕರಣ ವಿತರಣಾ ಕಾರ್ಯಕ್ರಮ ಪಿಲಾತಬೆಟ್ಟು ಗ್ರಾ.ಪಂ.ನ ಸಭಾಂಗಣದಲ್ಲಿ ನಡೆಯಿತು.       ಬಂಟ್ಚಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಫಲಾನುಭವಿಗಳಿಗೆ  ಸವಲತ್ತು ಹಾಗೂ ಮೂರ್ಜೆ ಸರಕಾರಿ ಹಿ.ಪ್ರಾಥಮಿಕ ಶಾಲೆ, ಅರಳ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಚಾರ್ಮಾಡಿ ಸರಕಾರಿ ಪ್ರಾಥಮಿಕ ಶಾಲೆಗೆ  ಪೀಠೋಪಕರಣ ವಿತರಿಸಿದರು.
IMG-20190828-WA0114 (1)
ಬಳಿಕ ಮಾತನಾಡಿದ ಅವರು,ಸರಕಾರದ ಜೊತೆ  ಸಂಘ,ಸಂಸ್ಥೆಗಳು ಸಾಮಾಜಿಕ ಕಾರ್ಯಗಳಲ್ಲಿ  ತೊಡಗಿಸಿದಾಗ  ಗ್ರಾಮದ ಅಭಿವೃದ್ಧಿ ಸಾಧ್ಯವಾಗುವುದು, ಸ್ವಸ್ತಿಕ ಪ್ರೆಂಡ್ಸ್ ಕ್ಲಬ್ ಜನಪರ ಕಾರ್ಯಗಳ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಬಂಟ್ವಾಳ ಕ್ಷೇತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು   25 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ.
ಹಂತ,ಹಂತವಾಗಿ   ಗ್ರಾಮದ ಬೇಡಿಕೆಯನ್ನು ಪೂರೈಸಲು ಶಕ್ತಿ ಮೀರಿ  ಪ್ರಯತ್ನಿಸುವುದಾಗಿ ಭರವಸೆಯಿತ್ತರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾಲೂಕು ಪಂಚಾಯತ ಸದಸ್ಯ ರಮೇಶ್ ಕುಡುಮೇರು, ಪಿಲಾತಬೆಟ್ಟು  ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷೆ ಲಕ್ಮೀ ಜೆ.ಬಂಗೇರ    ಕುಮಂಗಿಲ, ಇರ್ವತ್ತೂರು ಗ್ರಾ.ಪಂ.ಉಪಾಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರ್,, ಸದಸ್ಯ ರಾದ ಲಕ್ಮೀನಾರಾಯಣ ಹೆಗ್ಡೆ, ಯೋಗೇಂದ್ರ, ಸರೋಜ ಡಿ.ಶೆಟ್ಟಿ, ವಸಂತಿ, ಸೀತಾ,  ಪಿಲಾತಬೆಟ್ಟು  ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲಕ್ಮೀನಾರಾಯಣ ಉಡುಪ, ವಾಮದಪದವು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಮುಖ್ಯಕಾರ್ಯನಿರ್ವಣಾಧಿಕಾರಿ ಮಂಜಪ್ಪ ಮೂಲ್ಯ, ಕಂದಾಯ ನಿರೀಕ್ಷಕ ನವೀನ್, ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಮತ್ತಿರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಪೀಠೋಪಕರಣಕ್ಕೆ ಧನಸಹಾಯಗೈದ  ಹನುಮಂತ ಹಳ್ಳಿಗೇರಿ, ಹಮೀದ್ ದುಗ್ಗಮರಗುಡ್ಡೆ ಅವರನ್ನು ಅಭಿದಿನಂದಿಸಲಾಯಿತು.
ಇದೇ ವೇಳೆ  ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ ವಾಗಿ ಮೇಲ್ದರ್ಜೆಗೇರಿ  ಸುವಂತೆ   ಸ್ಥಳೀಯರು  ಶಾಸಕರಿಗೆ ಮನವಿ ಸಲ್ಲಿಸಿದರು.
ಮೂರ್ಜೆ ರಿಕ್ಷಾ ಪಾರ್ಕ್ ಗೆ  ಸಿಮೆಂಟ್  ಶೀಟ್      ಹಾಕಿಸುವುದು, ಮಂಚಗುಡ್ಡೆ , ದುಗ್ಗಮರ ಗುಡ್ಡೆ ಪ್ರದೇಶದಲ್ಲಿ ಬೋರ್ ವೆಲ್ ಮತ್ತು ನೀರಿನ ಟ್ಯಾಂಕ್ ನಿರ್ಮಾಣ, ಮೂರ್ಜೆ- ಕೊಳಕೆಬೈಲು ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸುವಂತೆಯು   ಮನವಿ ಮಾಡಲಾಯಿತು.ಪಿ.ಎಂ.ಪ್ರಭಾಕರ್  ಪ್ರಸ್ತಾವನೆಗೈದರು. ಪಿ.ಡಿ.ಒ. ರಾಜಶೇಖರ ರೈ ಸ್ವಾಗತಿಸಿ ,ವಂದಿಸಿದರು.

By Suddi9

Leave a Reply

Your email address will not be published. Required fields are marked *