ಉಡುಪಿ: ಎಪಿಕ್ ಅಥವಾ ವಿಶಿಷ್ಟ ಗುರುತುಚೀಟಿ ದಾಖಲಿಸದ ಉಡುಪಿ ಜಿಲ್ಲೆಯ ನಗರ ಪ್ರದೇಶದ ಸುಮಾರು 16,000 ಕಾರ್ಡ್‌ಗಳನ್ನು ಅಮಾನತಿನಲ್ಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,600 ಎಪಿಎಲ್, 5,000 ಬಿಪಿಎಲ್, 382 ಅಂತ್ಯೋದಯ ಕಾರ್ಡ್‌ಗಳು ಅಮಾನತಾಗಿವೆ.

ಅಮಾನತಿನಲ್ಲಿಡಲಾದ ಕಾರ್ಡುದಾರರು ಎಪಿಕ್ ಅಥವಾ ಯುಐಡಿ ಸಂಖ್ಯೆಯನ್ನು ನೀಡಿದರೆ ಅಮಾನತು ರದ್ದಾಗುತ್ತದೆ ಎಂದು ತಿಳಿದುಬಂದಿದೆ.
