ಉಡುಪಿ:ಜೇಸಿಐ ಪರ್ಕಳ ಘಟಕದ ಸ್ಥಾಪಕ ಸದಸ್ಯರಾಗಿದ್ದು ಅದರ ಪ್ರಗತಿಗೆ ನಿರಂತರ ಪ್ರೋತ್ಸಾಹ ನೀಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಅರ್ಜುನ ಯುವಕ ಮಂಡಲ, ಶೆಟ್ಟಿಬೆಟ್ಟು ಸಂಯುಕ್ತ ಪ್ರೌಢಶಾಲೆ ಮೊದಲಾದ ಹಲವಾರು ಸಂಘ ಸಂಸ್ಥೆಗಳಲ್ಲೂ ಪದಾಧಿಕಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ ಯಶಸ್ವಿ ಉದ್ಯಮ ಪರ್ಕಳದ ಸುಮoಗಲಾ ಪ್ರಾವಿಜನ್ ಸ್ಟೋರ್ಸ್ ಮಾಲೀಕರಾದ ಜೇಸಿ ಕೆ. ಪ್ರಕಾಶ್ ಶೆಣೈಯವರಿಗೆ ಭಾರತೀಯ ಜೇಸಿಸ್ ವಲಯ ಹದಿನೈದರ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಆಗಸ್ಟ್ 18 ರ ಭಾನುವಾರ ಜೇಸಿಐ ಕಾಪು ಆತಿಥ್ಯದಲ್ಲಿ ಕೆ1 ಸಭಾಂಗಣದಲ್ಲಿ ನಡೆದ ವಲಯದ ವ್ಯವಹಾರ, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ಸಮ್ಮೇಳನ “ಸಮೃದ್ಧಿ”ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಜೇಸಿ ಶಿರೀಶ್ ದುoದೂರವರ ಉಪಸ್ಥಿತಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
