ಬಂಟ್ವಾಳ: ದ.ಕ .ಜಿ .ಹಿರಿಯ ಪ್ರಾಥಮಿಕ ಪೆರಾಬೆ ಸರಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನಕ್ಕೆ ರಾಮನಗರ ಜೆಲ್ಲೆಯ ಬಿ.ಜೆ.ಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ವರದರಾಜ್ ಗೌಡ ಇವರು ಅದೃಷ್ಟ ಚೀಟಿ ಕರಪತ್ರ ಬಿಡುಗಡೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಆ.15ರಂದು ಸ್ವತಂತ್ರೋತ್ಸವದ ಸಂದರ್ಭದಲ್ಲಿ ವರದರಾಜ್ ಗೌಡ ಧರ್ಮಪತ್ನಿ ಹಾಗೂ ಮಗನೊಂದಿಗೆ ಆಗಮಿಸಿ ಪೆರಾಬೆ ಸರಕಾರಿ ಶಾಲೆಯ ಸುಮಾರು 70 ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ನೀಡಿದರು. ಜೇಸಿ ಐ ಅಲಂಕಾರು ವತಿಯಿಂದ ಪೆರಾಬೆ ಸರಕಾರಿ ಶಾಲೆಯ ಪರವಾಗಿ ವರದರಾಜ್ ದಂಪತಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ನಿವೃತ ವಾಯುಸೇನಾ ದಂಡಧಿಕಾರಿ ಕೆ.ಬಿ.ಶೆಟ್ಟಿ, ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪ್ರಶಾಂತ್ ರೈ, ಶರವೂರು ದೇವಸ್ಥಾನ ಮುಕ್ತೇಸರರಾದ ಕಮಲಾಕ್ಷ ರೈ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಗಂಗಾಧರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ ರೈ, ನಿವೃತ್ತ ಮುಖ್ಯಶಿಕ್ಷಕ ನಾಗಪ್ಪಗೌಡ, ಗ್ರಾ.ಪಂ. ಉಪಾಧ್ಯಕ್ಷರಾದ ಜನಾರ್ಧನ ಶೆಟ್ಟಿ, ಮುಖ್ಯಶಿಕ್ಷಕಿ ಹೇಮಲತಾ ಪ್ರದೀಪ್ , ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

