ಬಂಟ್ವಾಳ| ಭಾರತ ದೇಶದ ಸ್ವಾತಂತ್ರ್ಯ ಚಳುವಳಿಯು ಅತೀ ರೋಚಕವಾದುದು. ಲಕ್ಷಾಂತರ ಜನರು ಚಳುವಳಿಯಲ್ಲಿ ದುಮುಕಿ ಹುತಾತ್ಮರಾಗಿದ್ದಾರೆ.ಈಗ ಇದು ಇತಿಹಾಸ. ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಆ ಚಳವಳಿಯ ಕುರಿತು ನಾವೆಲ್ಲ ಮನನ ಮಾಡಿಕೊಳ್ಳಬೇಕು. ಇದಕ್ಕೆ ದೇಶದ ಇತಿಹಾಸದ ಕುರಿತ ತಿಳುವಳಿಕೆ ಅಗತ್ಯ ಎಂದು ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷÀ ಎಸ್. ಪಿ. ಚಂಗಪ್ಪ ಹೇಳಿದರು.

ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾವಿೂ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.
ಸರಕಾರವು 370 ನೇ ವಿಧಿಯನ್ನು ರದ್ದು ಮಾಡುವ ಮೂಲಕ ಭಾರತದ ಅಖಂಡತೆಯನ್ನು ಎತ್ತಿ ಹಿಡಿದಿದೆ, ಈ ಅಖಂಡತೆಯ ಅಗತ್ಯ ಮಹತ್ವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ದೇಶದ ಸಮಗ್ರತೆಯನ್ನು ಕಾಯುವಲ್ಲಿ ಸೈನಿಕ ಪಾತ್ರ ಮಹತ್ವವಾದುದು ನಾವಿಂದು ಪಡೆದ ಸ್ವಾತಂತ್ರ್ಯವನ್ನು ಉಳಿಸಿ ಗೌರವಿಸಬೇಕಾಗಿದೆ ಎಂದವರು ಹೇಳಿದರು.
ಎಸ್ ವಿ ಎಸ್ ಪದವಿ ಕಾಲೇಜು ಪ್ರಾಂಶುಪಾಲ ಡಾ|ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ, ಸ್ವಾತಂತ್ರ್ಯೋತ್ಸವನ್ನು ಇಂದು ಇಡೀ ದೇಶವು ಆಚರಿಸುತ್ತಿದೆ. ಇದೊಂದು ಸಂಭ್ರಮದ ಸಂದರ್ಭ.ಈ ಸಂಭ್ರಮದ ಹಿಂದೆ ಅನೇಕರ ತ್ಯಾಗ ಬಲಿದಾನವಿದೆ.ಇಂದು ನಾವು ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಅವರ ತ್ಯಾಗ ಬಲಿದಾನಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಪದವಿ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಡಾ|ಮಂಜುನಾಥ ಉಡುಪ, ಎನ್‍ಸಿಸಿ ಅಧಿಕಾರಿ ಕ್ಯಾಪ್ಟನ್ ಸುಂದರ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಹಾಡಿದರು.
ಎಸ್ ವಿ ಎಸ್ ಪದವಿ ಕಾಲೇಜು ಉಪಪ್ರಾಂಶುಪಾಲೆ ಡಾ| ಎಚ್. ಆರ್. ಸುಜಾತ ಅತಿಥಿ ಪರಿಚಯದೊಂದಿಗೆ ಸ್ವಾಗತಿಸಿದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ವಂದಿಸಿ, ಉಪನ್ಯಾಸಕ ಕಿಟ್ಟು ಕೆ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.
