ಬಂಟ್ವಾಳ: 72 ವರ್ಷಗಳ ಹಿಂದೆ ದಾಸ್ಯಮುಕ್ತ ಭಾರತ ಇಂದು ಭಯಮುಕ್ತವಾಗಿ ರಾಮರಾಜ್ಯವಾಗಬೇಕಾದರೆ ತ್ರಿಖಂಡ ಭಾರತ ಅಖಂಡವಾಗಬೇಕು,370 ವಿಧೇಯಕವನ್ನು ರದ್ದು ಪಡಿಸಿದ ದೇಶದ ಪ್ರಧಾನಿ ನರೇಂದ್ರ ಮೋದಿಯೇ ಮುಂದಿನ ಅವಧಿಯಲ್ಲೂ ನಾಯಕತ್ವ ಪಡೆದರೆ ಈ ದೇಶ ಸುಸಂಸ್ಕೃತ ದೇಶವಾಗಲಿದೆ ಎಂದು ವಿ.ಹಿಂ.ಪ.ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ. ಆಖಂಡ ಸಂಕಲ್ಪ ದಿನಾಚರಣೆಯ ಅಂಗವಾಗಿ ವಿ.ಹಿಂ.ಪ.,ಭಜರಂಗದಳ ಬಂಟ್ವಾಳ ಪ್ರಖಂಡದ ಆಶ್ರಯದಲ್ಲಿ ನಡೆದ ವಾಹನಜಾಥದ ಸಮರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡುತ್ತಿದ್ದರು.
ದೇಶದ ಯುವ ಜನಾಂಗ ಪ್ರಧಾನಿ ಮೋದಿಯವರ ಬೆಂಲಕ್ಕಿದ್ದು,ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದ ವೀರಪುರುಷರ ಸ್ಮರಣೆ ಇಂದು ಅನಿವಾರ್ಯವಾಗಿದೆ ಎಂದರು. ಬ್ರಹ್ಮರಕೊಟ್ಲು ಬ್ರಹ್ಮಸನ್ನಿಧಿಯ ಬಳಿ ವಾಹನಜಾಥಕ್ಕೆ ಖ್ಯಾತ ಯಕ್ಷಗಾನ ಕಲಾವಿದ,ವಿ.ಹಿಂ.ಪ.ನ ಪ್ರಮುಖ ಸರಪಾಡಿ ಆಶೋಕ್ ಶೆಟ್ಟಿ ಅವರು ಚಾಲನೆ ನೀಡಿದರು.ಬಳಿಕ ಜಾಥವು ಬಿ.ಸಿ.ರೋಡ್,ಪಾಣೆಮಂಗಳೂರು,ಮೆಲ್ಕಾ
