ಬಂಟ್ವಾಳ: ಯುವಜನತೆಗೆ  ತುಳುನಾಡಿನ  ಮಣ್ಣಿನ  ಸಂಸ್ಕೃತಿ ಮತ್ತು ಮಹತ್ವವನ್ನು  ಪರಿಚಯಿಸುವ ನಿಟ್ಟಿನಲ್ಲಿ ಕೆಸರುಗದ್ದೆ  ಕ್ರೀಡಾಕೂಟವು ಒಂದು ಉತ್ತಮ ವೇದಿಕೆಯಾಗಿದೆ ಎಂದು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿದ್ದಾರೆ.  ವೀರಕಂಬ  ಓಂಕಾರ್ ಫ್ರೆಂಡ್ಸ್  ಇದರ ನೇತೃತ್ವದಲ್ಲಿ ವೀರಕಂಬ ಗ್ರಾಮದ ಕುಮೇರ್ ಗದ್ದೆಯಲ್ಲಿ ನಡೆದ ‘ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

IMG-20190808-WA0026 ಗ್ರಾಮದ ಯುವಕರು  ಇಂತಹ ಕ್ರೀಡಾಕೂಟದ ಜೊತೆಗೆ  ಗ್ರಾಮದಲ್ಲಿರುವ  ಸಮಸ್ಯೆಗಳ ಬಗ್ಗೆ  ಗಮನಹರಿಸಿ  ಅವುಗಳಿಗೆ ಪರಿಹಾರ ಹುಡುಕುವ  ಜವಾಬ್ದಾರಿಯನ್ನು  ವಹಿಸಬೇಕೆಂದು  ಅವರು ಸಲಹೆ ನೀಡಿದರು.   ಜಿಪಂ         ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್ ,ತಾಲೂಕು ಪಂಚಾಯತ್ ಮಾಜಿ  ಮಾಜಿ ಉಪಾಧ್ಯಕ್ಷ  ದಿನೇಶ್ ಅಮ್ಟೂರು, ಉದ್ಯಮಿ  ಚಂದ್ರಶೇಖರ ಸಾಲಿಯಾನ್ ,ಮಜಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶಗೌಡ ಮೈರ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾಪ್ರತಿನಿಧಿ  ರೇವತಿ, ಓಂಕಾರ್ ಫ್ರೆಂಡ್ಸ್ನ ಅಧ್ಯಕ್ಷ ವಾಸು ನಾಯ್ಕ ಕುಮೇರ್ ಉಪಸ್ಥಿತರಿದ್ದರು. ಸತೀಶ್ ಅನಂತಾಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು  ಮೋಹನ್ ವಂದಿಸಿದರು.

By Suddi9

Leave a Reply

Your email address will not be published. Required fields are marked *