ಬಂಟ್ವಾಳ : ವಿದ್ಯುತ್ ಅಘಾತಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಎಂಬಲ್ಲಿ ಶನಿವಾರ ನಡೆದಿದೆ.ಇಲ್ಲಿನ ಜನತಾ ಗೃಹ ನಿವಾಸಿ ವಿಶ್ವನಾಥ ಬಂಗೇರ ಎಂಬವರ ಪತ್ನಿ ಗೀತಾ (೫೪) ಮೃತ ಮಹಿಳೆ.ಇವರು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ತಂತಿಯ ಮೇಲೆ ಬಟ್ಟೆಯನ್ನು ಒಣಗಲು ಹಾಕಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ.
ವಿದ್ಯುತ್ ಅಘಾತಕ್ಕೊಳಗಾಗಿ ಅಸ್ವಸ್ಥರಾಗಿದ್ದ ಇವರನ್ನು ತಕ್ಷಣ ತುಂಬೆ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿನ ವೈದ್ಯರು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದರು. ಮೃತರು ಪತಿ,ಮೂರು ಹೆಣ್ಣು,ಒಂದು ಗಂಡು ಮಕ್ಕಳ ಸಹಿತ ಬಂಧು,ಬಳಗವನ್ನು ಅಗಲಿದ್ದಾರೆ.ಬಂಟ್ವಾಳ ಆಸ್ಪತ್ರೆಗೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಗ್ರಾಮ ಲೆಕ್ಕಾಧಿಕಾರಿ ಪ್ರವೀಣ್ ಸಿಬ್ಬಂದಿ ಸದಾಶಿವ ಕೈಕಂಬ, ಲಕ್ಷ್ಮಣ ನರಿಕೊಂಬು, ಶಿವ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದರು.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
