ಬಂಟ್ವಾಳ ತಾಲ್ಲೂಕಿನ ವಗ್ಗ ನಿವಾಸಿ, ಹಿರಿಯ ಸ್ಯಾಕ್ಸೋಫೋನ್ ವಾದಕ ಬಾಬು ಸಪಲ್ಯ ವಗ್ಗ ಇವರಿಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಂಟರ್ ನ್ಯಾಷನಲ್ ವಚವಲ್ ಪೀಸ್ ವಿಶ್ವವಿದ್ಯಾನಿಲಯ ವತಿಯಿಂದ ಸಂಗೀತ ಕ್ಷೇತ್ರದ ಸಾಧನೆಗಾಗಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ಸಂಸ್ಥೆ ಚೇರಮೆನ್ ಡಾ.ಸಿ.ಪಾವ್ಲ್ ಎಬಾನ್ಝೆರ್, ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಪ್ರಾಂಶುಪಾಲ ಜಿ.ಆರ್.ಸುಧಾಕರ, ಡಾ.ಕಟ್ಟ ಸಾಂಭಾಶಿವ ನಾಯ್ಡು, ಡಾ.ಮಹೇಶ್ವರ ಶಿವಾಚಾರ್ಯಮಹಾಸ್ವಾಮಿ, ಡಾ.ಮಂಜುನಾಥ್ ಕೆ.ಭಟ್, ಡಾ.ಎಂ.ಎಸ್.ಶ್ರೀಜಕೃಷ್ಣನ್, ಡಾ.ಎಂ.ಎಸ್.ಸಂತೋಷ್ ನಾಯರ್, ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಮತ್ತಿತರರು ಇದ್ದರು.
