ಅಜೆಕಾರು:  ಅಜೆಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩ ನೇ ತಿಂಗಳ ಸಂಭ್ರಮ ಕಾರ್ಯಕ್ರಮ ಮುಖ್ಯೋಪಾಧ್ಯಾಯ ವಿಶ್ವನಾಥ ಎಸ್. ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜುಲಾಯಿ ೨೭ ರಂದು ನಡೆಯಲಿದ್ದು ಮಂಗಳೂರಿನ ಹಿರಿಯ ಸಾಧಕ ಡಾ.ಅಶೋಕ್ ಕುಮಾರ್ ಕಾಸರಗೋಡು ಅವರು ಹೆತ್ತವರಿಗೆ ಮತ್ತು ಮಕ್ಕಳಿಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.

೯.೩೦ ಗಂಎಯಿಂದ ೧೦.೦೦ ಗಂಟೆವರೆಗೆ ಶಾಲಾಭಿವೃದ್ಧಿ ಸಮಿತಿಯ ಸಭೆ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡ್ಯಾನ್ಸಿಂಗ್ ಸ್ಟಾರ್ ಸಂಕೇತ್ ಆಚಾರ್ಯ ಅವರ ನೃತ್ಯ ಕಾರ್ಯಕ್ರಮವಿದೆ. ಹಳೆ ವಿದ್ಯಾರ್ಥಿಗಳು ಮತ್ತು ಹೆತ್ತವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮ ನಿರ್ದೇಶಕ ಶೇಖರ ಅಜೆಕಾರು ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *