ಬಡಕಬೈಲು: ಸ್ವಚ್ಛ ಗ್ರಾಮ ಬಡಕಬೈಲು ಆಭಿಯಾನಕ್ಕೆ ಜು.28ರಂದು ಭಾನುವಾರ ಚಾಲನೆ ಬಡಕಬೈಲಿನಲ್ಲಿ ನಡೆಯಲಿದೆ. “ಸ್ವಚ್ಛ ಗ್ರಾಮ ಅಭಿಯಾನಕ್ಕೆ ಚಾಲನೆ” “ಸೌಹಾರ್ದ ಸಂಗಮ” “ಮಾದಕ ವ್ಯಸನ ಮುಕ್ತ ಅಭಿಯಾನ” “ವನಮಹೋತ್ಸವ ಕಾರ್ಯಕ್ರಮ”ಸ್ವಚ್ಛ ಭಾರತದ ಉದ್ದೇಶವನ್ನು ಮುಂದಿಟ್ಟುಕೊಂಡು ಬಡಕಬೈಲು ಗ್ರಾಮ ಸಮಿತಿ ನನ್ನ ಮನೆ ಸ್ವಚ್ಚ ಗ್ರಾಮ ಪರಿಕಲ್ಪನೆಯೊಂದಿಗೆ ನಮ್ಮಿಂದ ನಿಮಗಾಗಿ ಎಂಬ ಧ್ಯೇಯದ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸಲು ಬಡಕಬೈಲಿನಲ್ಲಿ ಸ್ವಚ್ಚ ಗ್ರಾಮ ಸಮಿತಿಯನ್ನು ರಚಿಸಿ ಈಗಗಾಲೇ ಬಡಕಬೈಲು ಪರಿಸರವನ್ನು ಸಚ್ಛವಾಗಿಡುವ ಪ್ರಯತ್ನವನ್ನು ಮಾಡುವ ಸಲುವಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಂಡಿದೆ.”
“ಸ್ವಚ್ಛ ಗ್ರಾಮ ಸಮಿತಿಯ ಸದಸ್ಯರು ಆಮಂತ್ರಣ ಪತ್ರಿಕೆಯನ್ನು ಚಂದ್ರಶೇಖರ ಶೆಟ್ಟಿ ಅವರಿಗೆ ನೀಡಿ ಅಹ್ವಾನಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ನೆರವೇರಿಸಿ ಆಶೀರ್ವದಿಸಲಿದ್ದಾರೆ. ಅಧ್ಯಕ್ಷತೆಯನ್ನು ಸ್ವಚ್ಛ ಗ್ರಾಮ ಸಮಿತಿ ಅಧ್ಯಕ್ಷಬಡಕಬೈಲು ನಾರಾಯಣ ಅಮ್ಮುಂಜೆ ವಹಿಸಿ ವನಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಡಕಬೈಲು ಬದ್ರಿಯಾ ಜುಮಾ ಮಸೀದಿ ಅತಿಥಿ ಬಹು/ ಇಲ್ಯಾಸ್ ಸಹದಿ,ಸಂತಡೊಮಿನೆಕ್ ಶಾಲೆಯ ಸಂಚಾಲಕ ಬಿಜು ಸಬೆಸ್ಟಿನ್ ,ಬಂಟ್ವಾಳಗ್ರಾಮಾಂತರ ಠಾಣಾಧಿಕಾರಿಪ್ರಸನ್ನ ಎಂ ಎಸ್,ಸ್ವಚ್ಚತಾ ಕಾರ್ಯಗಾರ ಕಿರಣ್ ಪಕ್ಕಲ,ದ.ಕಜಿಲ್ಲಾ ಪರಿಷತ್ ಸದಸ್ಯ ಡಿ.ಎ.ಅಬುಬಕ್ಕರ್,ಗ್ರಾ. ಪಂ. ಸದಸ್ಯರಾದ ಇಬ್ರಾಹೀಂ ನವಾಝ್,ಸುರೇಶ್ ಪೂಜಾರಿ ಮಣಿಕಂಠಪುರ,ಶಕುಂತಲ ಸ್ವಚ್ಛ ಗ್ರಾಮ ಉಪಾಧ್ಯಕ್ಷ ಜ/ಎಂ ಎಸ್ ಖಾದರ್ , ಕರಿಯಂಗಳ ಪಂ. ಅಭಿವೃದ್ಧಿ ಅಧಿಕಾರಿ ಪದ್ಮ ನಾಯಕ್,ವೈದ್ಯಾಧಿಕಾರಿ ಡಾ.ಸುದರ್ಶನ್ ಸಿ.ಎಂ ಮತ್ತಿತರರು ಭಾಗವಹಿಸಲಿದ್ದಾರೆ.ಎಂದು ಸ್ವಚ್ಛ ಗ್ರಾಮ ಸಮಿತಿಯ ಪ್ರಕಟನೆ ತಿಳಿಸಿದೆ.

