ಕೈಕಂಬ :ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಾಡಿ ಕಾಪಿಕಾಡು ರಸ್ತೆಯ ಮದ್ಯೆಯಲ್ಲಿ ಮರಣ ಗುಂಡಿಯೊಂದು ವಾಹನ ಸವಾರರಿಗೆ ಆತಂಕವನ್ನು ಉಂಟುಮಾಡುತ್ತಿದೆ. ಕಲ್ಲಾಡಿ ಕಾಪಿಕಾಡುರಸ್ತೆಯಲ್ಲಿ ಬಾರ್ದಿಲ ದೇವಸ್ಥಾನ ಬಳಿ ರಸ್ತೆಯ ಮದ್ಯದಲ್ಲಿರುವ ಕೊಳವೆ ಬಾವಿಗೆ ಮುಟ್ಟಿದ ಕಾಂಕ್ರೀಟ್ ಸ್ಲ್ಯಾಬ್ ಪಂಚಾಯತ್ ಮೇಲಕ್ಕೆ ಎತ್ತಿ ಎಟ್ಟಿದ್ದು ಮುಚ್ಚುವ ಗೋಜಿಗೆ ಹೋಗಿಲ್ಲ ಕಳೆದ 3 ವರ್ಷಗಳ ಹಿಂದೆ ಈ ರಸ್ತೆ ಅಗಲೀಕರಣಗೊಂಡಿತ್ತು. ಈ ವೇಳೆ ರಸ್ತೆಯ ಅಂಚಿನಲ್ಲಿದ್ದ ಕೊಳವೆ ಬಾವಿ ರಸ್ತೆ ಅಗಳಗೊಂಡ ಕಾರಣದಿಂದಾಗಿ ರಸ್ತೆಯ ನಡುವೆ ಉಳಿಯಿತು.
ವಿಫುಲವಾದ ನೀರಿರುವ ಈ ಕೊಳವೆಬಾವಿಯನ್ನು ಶಾಶ್ವತವಾಗಿ ಮುಚ್ಚಿದರೆ ಕಾಪಿಕಾಡು ಪ್ರದೇಶಕ್ಕೆ ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಗುತ್ತಿಗೆದಾರರು ಕೊಳವೆಬಾವಿಯನ್ನು ರಸ್ತೆಮಧ್ಯೆ ಉಳಿಸಿಕೊಂಡು ಅದರ ಮೇಲೆ ತೆಗೆದು ಮುಚ್ಚಲು ಅನುಕೂಲವಾಗಲೆಂದು ಕಾಂಕ್ರೀಟ್ ಸ್ಲ್ಯಾಬ್ ನಿರ್ಮಿಸಿ ಮುಚ್ಚಿದ್ದರು. ಕೊಳವೆಬಾವಿ ಕೆಟ್ಟು ದುರಸ್ಥಿಮಾಡಬೇಕಾದ ಸಂದರ್ಭದಲ್ಲಿ ಕಾಂಕ್ರೀಟ್ ಸ್ಲ್ಯಾಬನ್ನು ತೆಗೆದು ನಂತರ ಮುಚ್ಚಬೇಕಾಯಿತು. ಆದರೆ ಪಂಚಾಯತ್ ಕೊಳವೆಬಾವಿ ದುರಸ್ಥಿಗಾಗಿ ತೆಗೆದ ಸ್ಲ್ಯಾಬನ್ನು ಮರುಮುಚ್ಚದೇ ರಸ್ತೆ ಮಧ್ಯೆಯೇ ಬಿಟ್ಟಿದ್ದು ವಾಹನ ಸವಾರರಿಗೆ ಕಂಟಕ ಪ್ರಾಯವಾಗಿ ಕಾಡುತ್ತಿದೆ. ರಾತ್ರಿ ಸಮಯದಲ್ಲಿ ಇದು ಇನಷ್ಟು ಅಪಾಯಕಾರಿಯಾಗಿದೆ.ಈ ರಸ್ತೆಯಲ್ಲಿ ಹೊಸಬರು ಯಾರಾದರೂ ವಾಹನ ಸವಾರರು ಬಂದರೆ ಈ ಮರಣ ಗುಂಡಿಯ ಅರಿವಿಲ್ಲದೇ ಅಪಘಾತಕ್ಕೀಡಾಗುವುದು ಖಚಿತ ಕೊಳವೆ ಬಾವಿ ದುರಸ್ಥಿ ಮಾಡಿ ಸ್ಲ್ಯಾಬನ್ನು ಸರಿಯಾಗಿ ಮುಚ್ಚದೇ ನಿರ್ಲಕ್ಷ್ಯ ವಹಿಸಿರುವ ಗ್ರಾ.ಪಂ. ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ.ಎಂದು ವಾಹನ ಸವಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
